Goose: ಪತ್ತೆಯಾಯ್ತು ಅಪರೂಪದ ಹೆಬ್ಬಾತು!

ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಡಬ್ಮಿಳಿ ಕತ್ತಿನ ಹೆಬ್ಬಾತು ಕಾಣಿಸಿಕೊಂಡಿದೆ

ನಂಜನಗೂಡು ತಾಲೂಕಿನ ಹದಿನಾರು ಕೆರೆಯಲ್ಲಿ ಹೆಬ್ಬಾತು ಪ್ರತ್ಯಕ್ಷವಾಗಿದೆ

ಶಶಾಂಕ್ ಎಂಬುವವರು ಹೆಬ್ಬಾತುವಿನ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ

ಶಶಾಂಕ್ ತಮ್ಮ ಸ್ನೇಹಿತರೊಂದಿಗೆ ಹದಿನಾರು ಕೆರೆ ಬಳಿ ಹೋದಾಗ ಹೆಬ್ಬಾತು ಕಾಣಿಸಿಕೊಂಡಿದೆ

ಹೆಬ್ಬಾತುವಿನ ದೇಹವು ಕಪ್ಪು-ಬೂದು ಬಣ್ಣದಿಂದ ಕೂಡಿದೆ

ಸುಂದರವಾದ ಹೆಬ್ಬಾತು ಗುಲಾಬಿ ಬಣ್ಣದ ಆಕರ್ಷಣೀಯ ಕೊಕ್ಕನ್ನು ಹೊಂದಿದೆ

ಹೆಬ್ಬಾತುವಿನ ಕಾಲು ಹಾಗೂ ಕಣ್ಣಿನ ವರ್ತುಲ ಹಳದಿ ಬಣ್ಣದಿಂದ ಕೂಡಿದೆ

ಹೆಬ್ಬಾತು ಒಂದು ಜಲವಾಸಿ ವಲಸೆ ಹಕ್ಕಿಯಾಗಿದೆ

ಹೆಬ್ಬಾತುಗಳು ಹೆಚ್ಚಾಗಿ ಮಧ್ಯ ಏಷ್ಯಾದ ಪರ್ವತ ಶ್ರೇಣಿಗಳ ಕೆರೆ ಗುಂಟೆಗಳಲ್ಲಿ ಕಂಡು ಬರುತ್ತವೆ