ಬನ್ನಿ ಕೂಡಲ ಸಂಗಮ ಕ್ಷೇತ್ರದ ದರ್ಶನ ಮಾಡಿ

ಬೃಹತ್ತಾದ ಗೋಪುರ, ಕಣ್ಮನ ಸೆಳೆಯೋ ನದಿ ನೀರಿನ ಹರಿವು

ನೀರಲ್ಲೇ ನಿರ್ಮಾಣವಾದ ಗಟ್ಟಿಮುಟ್ಟಾದ ಕಾರಿಡಾರ್

ದೇವಾಲಯದ ಒಳಹೊಕ್ಕಾಗ ಸಿಗೋ ಆನಂದ, ಸದಾ ಕೇಳಿ ಬರುವ ಗಂಟೆ ನಾದ

ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿರುವ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳ

ಇಲ್ಲಿ ಕಾಣೋ ಕೂಡಲ ಸಂಗಮನಾಥ ದೇಗುಲವು ಸುಂದರವಾದ ಕೆತ್ತನೆ ಹೊಂದಿರುವ ಕಲ್ಯಾಣ ಚಾಲುಕ್ಯರ ಕೊಡುಗೆಯಾಗಿದೆ

ಇಲ್ಲಿಗೆ ಆಗಮಿಸೋ ಭಕ್ತರು ದೇವಸ್ಥಾನದ ಒಳಗಡೆ ಶಿವನನ್ನ ಹೋಲುವ ಸಂಗಮನಾಥನಿಗೆ ಭಕ್ತಿಯಿಂದ ಕೈ ಮುಗಿಯುತ್ತಾರೆ

ಇಲ್ಲಿ ನಿತ್ಯ ವಿಶೇಷ ಪೂಜೆ, ಮಂಗಳಾರತಿ, ಕಳಸಾರತಿ ನೆರವೇರುತ್ತವೆ

ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಇಲ್ಲೇ ವಿಲೀನಗೊಳ್ಳೋದು ಈ ಕ್ಷೇತ್ರದ ಇನ್ನೊಂದು ವಿಶೇಷ

ಬಸವೇಶ್ವರರ ಐಕ್ಯ ಮಂಟಪ ನೋಡಲೆಂದೇ ಇಲ್ಲಿಗೆ ಭಕ್ತರು ಆಗಮಿಸೋದು ಹೆಚ್ಚು