ಹೊಸ ವೋಲ್ವೋ ಮಲ್ಟಿ ಆಕ್ಸೆಲ್ ಬಸ್ ಲೋಕಾರ್ಪಣೆ!

ಅಂತಾರಾಜ್ಯ ಪ್ರಯಾಣಿಕರಿಗಾಗಿ ವಿಶೇಷ ಬಸ್ವೊಂದನ್ನು ರಸ್ತೆಗೆ ಇಳಿಸಿದ KSRTC

ಒಟ್ಟು 50 ವೋಲ್ವೋ ಕಂಪನಿಯ 9600S ಮಲ್ಟಿ ಆಕ್ಸೆಸ್ ಬಸ್ಸುಗಳನ್ನು ಖರೀದಿ ಮಾಡಿರುವ KSRTC

ಇಂದು 20 ಬಸ್ಸುಗಳಿಗೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ ವೇಳೆಗೆ ಉಳಿದ 30 ಬಸ್ಸುಗಳಿಗೆ ಚಾಲನೆ ಸಿಗಲಿದೆ

ಒಂದು 9600S ಮಲ್ಟಿ ಆಕ್ಸೆಸ್ ಸ್ಲೀಪರ್ ಬಸ್ ಬೆಲೆ ಬರೋಬ್ಬರಿ 1 ಕೋಟಿ 70 ಲಕ್ಷ ರೂ

ಹೊಸ ಬಸ್ಗಳಿಗೆ 'ಅಂಬಾರಿ ಉತ್ಸವ' ಎಂದು ಹೆಸರಿಡಲಾಗಿದೆ

ಮಲ್ಟಿ ಆಕ್ಸೆಸ್ ಸ್ಲೀಪರ್ ಬಸ್​​ಗಳು ಫೆಬ್ರವರಿ 24ರಿಂದ ಪ್ರಯಾಣ ಆರಂಭಿಸಲಿವೆ

ಇದು ಯುರೋಪಿಯನ್ಮಾದರಿಯ ಎಸಿ-ಸ್ಲೀಪರ್​​ ಬಸ್ಆಗಿದ್ದು,40+2 ಆಸನಗಳನ್ನು ಹೊಂದಿದೆ

ಬಸ್ ಬೆಂಗಳೂರಿನಿಂದ ಮಂಗಳೂರು, ಕುಂದಾಪುರ, ಪಣಜಿ, ಪುಣೆ, ಹೈದರಾಬಾದ್​, ಸಿಕಂದ್ರಾಬಾದ್​, ಎರನಾಕುಲಂ, ತ್ರಿಶೂರ್ ಮತ್ತು ತಿರುವನಂಥಪುರಂಗೆ ಸಂಚರಿಸಲಿವೆ

ಬಸ್ಗಳು ಪ್ರಯಾಣಿಕರಿಗೆ ಐಷಾರಾಮಿ ಪ್ರಯಾಣದ ಅನುಭವ ನೀಡಲಿವೆ