KSRTC ಇಂದ ಜೋಗ ಜಲಪಾತಕ್ಕೆ ಪ್ಯಾಕೇಜ್ ಟೂರ್

ನಾಡಿನ ಪ್ರಖ್ಯಾತ ಜಲಪಾತ ಜೋಗಕ್ಕೆ ಕೆಎಸ್ಆರ್​ಟಿಸಿ ವಿಶೇಷ ಪ್ಯಾಕೇಜ್​ಗಳ ಮೂಲಕ ಬಸ್ ಸೌಲಭ್ಯ ಕಲ್ಪಿಸಿದೆ

ಕೆಎಸ್ಆರ್​ಟಿಸಿ ದಾವಣಗೆರೆ ಮತ್ತು ಹರಿಹರದಿಂದ ಶಿವಮೊಗ್ಗದ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಸಾರಿಗೆ ಬಸ್ ವ್ಯವಸ್ಥೆ ಮಾಡಿದೆ

ಈ ಪ್ಯಾಕೇಜ್ ಜುಲೈ 17 2022 ರಿಂದಲೇ ಚಾಲ್ತಿಯಲ್ಲಿದೆ

ಪ್ರತಿ ರವಿವಾರ ಮತ್ತು ರಜಾ ದಿನಗಳಂದು ಜೋಗ ಜಲಪಾತ ಮತ್ತು ಶಿರಸಿಗೆ ವಿಶೇಷ ಪ್ಯಾಕೇಜ್​ನಡಿ ರಾಜಹಂಸ ಬಸ್ ವ್ಯವಸ್ಥೆ ಮಾಡಿದೆ

ಪ್ಯಾಕೇಜ್‍ನ ಸಮಯ ಹಾಗೂ ಪ್ರಯಾಣ ದರದ ವಿವರ ಇಂತಿವೆ

ಮುಂದಿನ ಸ್ಲೈಡ್ ಓದಿ...

ಬೆಳಗ್ಗೆ 7 ಗಂಟೆಗೆ ದಾವಣಗೆರೆಯಿಂದ ಹೊರಡುತ್ತದೆ

12 ಗಂಟೆಗೆ ಶಿರಸಿಯಿಂದ ಜೋಗಕ್ಕೆ ಹೊರಡುತ್ತದೆ

ಸಂಜೆ 4.30ಕ್ಕೆ ಜೋಗ ಜಲಪಾತದಿಂದ ದಾವಣಗೆರೆಗೆ ಬಸ್ ಹೊರಡಲಿದೆ

ದಾವಣಗೆರೆಯಿಂದ ಶಿರಸಿ-ಜೋಗ ವಿಶೇಷ ಪ್ಯಾಕೇಜ್ ದರ ಹೋಗಿಬರಲು ರೂ. 600 ಇದೆ. ಈ ದರ ಮಕ್ಕಳಿಗೆ ರೂ. 450. ಆಗಿದೆ