ಕೋತಿರಾಜ್! ಆ ಹೆಸ್ರು ಕೇಳಿದ್ರೇನೇ ಮೈ ರೋಮಾಂಚಕ ಆಗುತ್ತೆ
ಎತ್ತರದ ದೈತ್ಯ ಕೋಟೆಗಳನ್ನ ಏರೋದ್ರಲ್ಲಿ ಅಷ್ಟು ಫೇಮಸ್ ಆಗಿರೋ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಈಗ ಕರಾವಳಿಗೂ ಲಗ್ಗೆಯಿಟ್ಟಿದ್ದಾರೆ.
ದಕ್ಷಿಣ ಕನ್ನಡದ ಬೆಳ್ತಂಗಡಿ ಬಳಿಯಿರೋ ಪ್ರಸಿದ್ಧ ಗಡೈಕಲ್ ಏರಿದ್ದಾರೆ ಕೋತಿರಾಜ್.
ಗಡಾಯಿಕಲ್ಲು ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿದ್ದು, ಕೋತಿರಾಜ್ ಈ ಬೃಹತ್ ಕಲ್ಲನ್ನು ರೋಪ್ ಸಹಾಯದಿಂದ ಏರಿ ಸಾಧನೆ ಮಾಡಿದ್ದಾರೆ.
ಈ ಮೂಲಕ ಬರೀ ರೋಪ್ನಲ್ಲಿ ಗಡಾಯಿಕಲ್ಲು ಏರಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಕೋತಿರಾಜ್ ಪಾತ್ರವಾಗಿದ್ದಾರೆ.
ಗಡಾಯಿಕಲ್ಲು ಕೆಳಗಿರುವ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಏರಲು ಶುರುಮಾಡಿದ್ರು.
ನೋಡ ನೋಡುತ್ತಿದ್ದಂತೆಯೇ ಎಲ್ರೂ ಹುಬ್ಬೇರಿಸುವಂತೆ ಗಡಾಯಿಕಲ್ಲನ್ನು ಏರಿ ಸಾಧನೆ ಮಾಡಿದ್ರು.
ಜೋಗದಲ್ಲಿ ಬಿದ್ದು ಬೆನ್ನುಮೂಳೆ ಏಟುಮಾಡಿಕೊಂಡಿದ್ದ ಕೋತಿರಾಜು ಇದೀಗ ಒಂದೂವರೆ ವರ್ಷ ವಿಶ್ರಾಂತಿ ಬಳಿಕ ಇದೀಗ ಮತ್ತೆ ಸಾಹಸ ಮುಂದುವರಿಸಿದ್ದಾರೆ.
ಕ್ಲೈಂಬಿಂಗ್ ಫೌಂಡೇಶನ್ ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು ಇದೇ ಕಾರಣಕ್ಕೆ ಇಡೀ ರಾಜ್ಯದಲ್ಲಿ ಹೀಗೆ ಸಾಹಸ ಕಾರ್ಯ ನಡೆಸೋ ಗುರಿ ಹೊಂದಿದ್ದಾರೆ.
ಗಡಾಯಿಕಲ್ಲಿನ ಮೇಲೆ ಕರ್ನಾಟಕ ಧ್ವಜ ಹಾರಿಸಿದ್ದಾಗಿ ಕೋತಿರಾಜ್ ತಿಳಿಸಿದ್ರು.