ಕರಾವಳಿಯ ದೈವಾರಾಧನೆ ಉತ್ತರ ಕರ್ನಾಟಕಕ್ಕೂ ಕಾಲಿಟ್ಟಿದೆ.

ಕೊರಗಜ್ಜ ಈಗ ಹಾವೇರಿ ಜಿಲ್ಲೆಯ ಕರಿಮತ್ತಿಹಳ್ಳಿಯಲ್ಲಿ ಕಾರಣಿಕ ತೋರುತ್ತಿದ್ದಾನೆ.

ಕೊರಗಜ್ಜ ಘಟ್ಟ ದಾಟಿ ಬಯಲುಸೀಮೆ ಪ್ರವೇಶಿಸಿದ ಹಿಂದೆ ರೋಚಕ ಕಥೆಯಿದೆ.

ಹಾವೇರಿಯ ಫಕ್ಕಿರೇಶ್ ಅವರು ಮಂಗಳೂರಿನ ಆಸ್ಪತ್ರೆಗೆ ಹೋದಾಗ ಕೊರಗಜ್ಜನ ಕನಸು ಬಿದ್ದಿತ್ತಂತೆ.

ಮರಳಿ ಊರಿಗೆ ಬಂದಾಗ ಅವರ ಹೊಲದಲ್ಲಿ ಕಲ್ಲೊಂದು ಕಾಣಿಸಿತಂತೆ.

ಮಂಗಳೂರಿನ ಕುತ್ತಾರಿನಲ್ಲಿರುವ ಕೊರಗಜ್ಜನ ಮೂಲಸ್ಥಾನದಲ್ಲಿ ಪ್ರಶ್ನೆ ಇಟ್ಟರಂತೆ.

ಪ್ರಶ್ನೆಯಲ್ಲಿ ಕಲ್ಲಿನಲ್ಲೇ ಕೊರಗಜ್ಜ ನೆಲೆಸಿದ್ದಾನೆ ಎನ್ನಲಾಯಿತಂತೆ.

ಮುಂದೆ ಇದೇ ಊರೆಲ್ಲ ಸುದ್ದಿಯಾಗಿ ಕೊರಗಜ್ಜ ದೈವಸ್ಥಾನ ನಿರ್ಮಿಸಿದರಂತೆ.

ಪ್ರತಿದಿನ ಬೆಳಗ್ಗೆ 9 ರಿಂದ 6 ಗಂಟೆಯವರೆಗೆ ಅಜ್ಜನ ದರ್ಶನ, ಪ್ರಶ್ನಾಚಿಂತನೆ ಇತ್ಯಾದಿಗಳು ನಡೆಯುತ್ತಿವೆ.

ಹಾವೇರಿಯ ಭಕ್ತರು ದೈವಕ್ಕೆ ವೀಳ್ಯದೆಲೆ, ಚಕ್ಕುಲಿಗಳನ್ನು ಅರ್ಪಿಸಿ ಪೂಜಿಸುತ್ತಿದ್ದಾರೆ.