ಕೊಪ್ಪಳದಲ್ಲಿ ಪೊಲೀಸರು ಹುಂಜಗಳನ್ನ ಅರೆಸ್ಟ್ ಮಾಡಿದ್ದಾರಂತೆ!

ಜೂಜಾಡುವವರನ್ನು ಹಿಡಿದು ಜೈಲಿಗೆ ಹಾಕುವುದು ವಾಡಿಕೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

ಜೂಜಾಟದಲ್ಲಿ ತೊಡಗಿಸಿದ್ದ ಹುಂಜಗಳನ್ನು ಹಿಡಿದು ಬಂಧಿಖಾನೆಗೆ ಹಾಕಲಾಗಿದೆ.

ಹುಂಜಗಳ ಜೊತೆ 9 ಬೈಕ್​ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ

ಪುಡಾರಿಗಳು ಜೂಜಾಟಕ್ಕೆ ತಂದಿದ್ದ ಹುಂಜಗಳನ್ನು ಅಲ್ಲೇ ಬಿಟ್ಟುಹೋಗಿದ್ದರು.

ಪೊಲೀಸರು ಅಲ್ಲಿದ್ದ 3 ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ

ಹುಂಜಗಳನ್ನು ನೇರವಾಗಿ ಬಂಧಿಖಾನೆಯಲ್ಲಿಟ್ಟು ಲಾಕ್ ಮಾಡಿದ್ದಾರೆ.

ಹುಂಜಗಳನ್ನು ಬಂಧಿಸಿರುವುದು ಸಹಜವಾಗಿ ಪ್ರಾಣಿಪ್ರಿಯರನ್ನು ಕೆರಳಿಸುವಂತೆ ಮಾಡಿದೆ.

ಪೊಲೀಸರು ನ್ಯಾಯಾಧೀಶರ ಮುಂದೆ ಹುಂಜಗಳನ್ನು ಹಾಜರುಪಡಿಸಬೇಕಿದೆ

ಆ ನಂತರವಷ್ಟೇ ಹುಂಜಗಳು ಬಿಡುಗಡೆಯಾಗಬಹುದಾಗಿದೆ