ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಡ್ತಾರಾ ಸಿಎಂ?

ಈಗಾಗಲೇ ಯುವಜನತೆ ಮದ್ಯಪಾನ, ಧೂಮಪಾನ ಅಂತಾ ಕೆಟ್ಟ ಕೆಟ್ಟ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ

ಈ ಮಧ್ಯೆ ಕರ್ನಾಟಕ ಸರ್ಕಾರವು ಮದ್ಯ ಖರೀದಿಸುವ ವಯಸ್ಸಿನ ನಿರ್ಬಂಧವನ್ನು ಸಡಿಲಿಸಲು ನಿರ್ಧರಿಸಿದೆ

ಮದ್ಯ ಉದ್ಯಮದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವು ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 18 ಕ್ಕೆ ಇಳಿಸಲು ಮುಂದಾಗಿದೆ

ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತು) ನಿಯಮಗಳು-1967'ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯು ಕರಡು ಪ್ರಸ್ತಾವನೆಯನ್ನು ಪ್ರಕಟಿಸಿದೆ

ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) (ತಿದ್ದುಪಡಿ) ನಿಯಮಗಳು-2023 ಎಂಬ ಶೀರ್ಷಿಕೆಯ ಕರಡು ಅಧಿಸೂಚನೆಯನ್ನು ಸರ್ಕಾರವು ಸೋಮವಾರ ಪ್ರಕಟಿಸಿದೆ

ಸರ್ಕಾರವು ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪ/ಸಲಹೆ ನೀಲು 30 ದಿನಗಳ ಕಾಲಾವಕಾಶ ನೀಡಿದೆ

ಈ ಹಿಂದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿತ್ತು

ಆದರೆ ಈಗ ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕಿಳಿಸಲು ಸರ್ಕಾರ ಸಜ್ಜಾಗಿದೆ

ಸೆಕ್ಷನ್‌ 10(1)(ಇ) ನಿಯಮವನ್ನು ತಿದ್ದುಪಡಿ ಮಾಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸ ತಿದ್ದುಪಡಿ ಹೇಳುತ್ತದೆ