Karnatakaದಲ್ಲಿನ ಮದ್ಯ ಪ್ರಿಯರ ಆಸೆಗೆ ತಣ್ಣೀರು

ಮದ್ಯ ಖರೀದಿಗೆ ವಯೋಮಿತಿ ಇಳಿಕೆ ಮಾಡುವ ತನ್ನ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ

1967ರ ಅಬಕಾರಿ ನಿಯಮ 10(1) (ಇ)ಕ್ಕೆ  ತಿದ್ದುಪಡಿ ಮಾಡಿದ್ದ ರಾಜ್ಯ ಸರ್ಕಾರ ಮದ್ಯ ಖರೀದಿಸಲು 21 ವಯಸ್ಸೇ ಆಗಬೇಕಂತಿಲ್ಲ

ಈವರೆಗೆ ಇದ್ದ ನಿಯಮವನ್ನು ಪರಿಷ್ಕರಿಸಲು ನಿರ್ಧರಿಸಿತ್ತು. ಆದರೆ ಭಾರೀ ವಿರೋಧದಿಂದ ಈ ನಿರ್ಧಾರವನ್ನು ಇದೀಗ ಸರ್ಕಾರ ಕೈಬಿಟ್ಟಿದೆ

ಈ ಹಿಂದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿತ್ತು

ಆದರೆ ಈಗ ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕಿಳಿಸಲು ಸರ್ಕಾರ ಸಜ್ಜಾಗಿದೆ

ಅಂದರೆ ಸೆಕ್ಷನ್‌ 10(1)(ಇ) ನಿಯಮವನ್ನು ತಿದ್ದುಪಡಿ ಮಾಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸ ತಿದ್ದುಪಡಿ ಹೇಳುತ್ತದೆ

ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮಗಳು 1965 ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಆಗಿದೆ

ಈ ಗೊಂದಲವನ್ನು ಯುವಕರಿಗೆ ಮತದಾನದ ವಯಸ್ಸಿಗೆ ಅನುಗುಣವಾಗಿ ಮಾಡುವುದರ ಜೊತೆಗೆ ಇಲಾಖೆಯು ಈ ಗೊಂದಲವನ್ನು ಪರಿಹರಿಸಲು ಬಯಸಿದೆ

ಮದ್ಯ ಉದ್ಯಮದಿಂದ 2019 - 20ರಲ್ಲಿ 21,583 ಕೋಟಿ ರೂ ಆದಾಯ ಸರ್ಕಾರದ ಬೊಕ್ಕಸ ಸೇರಿದ್ದರೆ 2021-22ರಲ್ಲಿ 26,377 ಕೋಟಿ ರೂ. ಆದಾಯ ಬಂದಿದೆ