ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ನುಡಿಗಳು

ಪ್ರತಿವರ್ಷದಂತೆ ಈ ಬಾರಿ ಕೊಡೇಕಲ್ ಕಾಲಜ್ಞಾನಿ ಬಸವಣ್ಣನ ಭವಿಷ್ಯದ ವಚನ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮದಲ್ಲಿರುವ ಕಾಲಜ್ಞಾನಿ ಬಸವಣ್ಣನ ದೇವಸ್ಥಾನ ಇದೆ.

ಇಲ್ಲಿ ಕಾಲಜ್ಞಾನಿ ಬಸವಣ್ಣನವರ ಭವಿಷ್ಯ ವಚನಗಳನ್ನೆ ನುಡಿಯುತ್ತಾರೆ.

ಈ ವಚನದ ನುಡಿಗಳನ್ನೇ ಮುಂದಿನ ವರ್ಷದ ಭವಿಷ್ಯದ ಹೇಳಿಕೆ ಎಂದು ಭಕ್ತರು ನಂಬುತ್ತಾರೆ.

ಬಸವರಾಜ ಭದ್ರಗೋಳ ಎಂಬವರು ವಚನದ ನುಡಿಯನ್ನು ವಿಶ್ಲೇಷಣೆ ಮಾಡಿ ಹೇಳುತ್ತಾರೆ

ನುಡಿದಂತೆ ನಡೆಯುವರಿಗೆ ಮತ್ತೆ ಅಧಿಕಾರ ಸಿಗಲಿದೆ ಎಂದು ವಚನ ನುಡಿಯ ವಿಶ್ಲೇಷಣೆ ಆಗಿದೆ.

ಪಕ್ಷಾಂತರ, ಕುದುರೆ ವ್ಯಾಪಾರ ಮಾಡುವ ಪಕ್ಷದವರಿಗೆ ಶಾಸಕರಿಗೆ ಅಧಿಕಾರ ಯೋಗವಿಲ್ಲ.

ಬಣ್ಣ ಬಣ್ಣದ ಮಾತುಗಳನ್ನಾಡೋರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ.

ಕಳೆದ ವರ್ಷದ ವಚನದ ನುಡಿಯೂ ನಿಜವಾಗಿದೆ. ಪ್ರತಿ ವರ್ಷ ಈ ವಚನ ನುಡಿ ಕೇಳಲು ಭಕ್ತರು ಆಗಮಿಸುತ್ತಾರೆ.