ಬೇಸಿಗೆಯಲ್ಲೂ ಧುಮ್ಮುಕ್ಕುತ್ತಿದೆ ಜೋಗ ಜಲಪಾತ!

ಜೋಗ ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿದೆ ಶರಾವತಿಯ ಜಲಧಾರೆ

ಬೇಸಿಗೆಯಲ್ಲೂ ನಳನಳಿಸುತ್ತಿದೆ ಜೋಗ್ ಫಾಲ್ಸ್

ವಿಶ್ವದ ಅತ್ಯಂತ ನಯನಮನೋಹರ ಜಲಪಾತಗಳಲ್ಲಿ ಜೋಗ ಕೂಡ ಒಂದು

ಸಾಮಾನ್ಯವಾಗಿ ಜೋಗ ಜಲಪಾತ ಮುಂಗಾರು ಮಳೆ ಸಂದರ್ಭದಲ್ಲಿ ಕಣ್ಮನ ಸೆಳೆಯುತ್ತದೆ

ಆದರೆ ಈಗ ಜೋಗದಲ್ಲಿ ಬೇಸಿಗೆಯಲ್ಲೂ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿದೆ

ಮಹಾತ್ಮ ಗಾಂಧಿ ಪವರ್ ಸ್ಟೇಷನ್ಗೆ ನೀರು ಹರಿಸುವ ಚೈನಾ ಗೇಟ್ನಲ್ಲಿ ನೀರು ಸೋರಿಕೆಯಾಗುತ್ತಿದೆ

ನೀರು ನೇರವಾಗಿ ನದಿ ಮೂಲಕ ಜಲಪಾತಕ್ಕೆ ಹರಿದು ಬರುತ್ತಿದೆ

ಪವರ್ ಚಾನಲ್ಗಳಲ್ಲೂ ಸಾಕಷ್ಟು ನೀರು ಸೋರಿಕೆಯಾಗುತ್ತಿದ್ದು ಜಲಪಾತಕ್ಕೆ ನೀರು ಹರಿಯುತ್ತಿದೆ

ಹೀಗಾಗಿ ಬೇಸಿಗೆ ಕಾಲದಲ್ಲೂ ಜಲಧಾರೆ ಧುಮ್ಮಿಕ್ಕಿ ಹರಿಯುತ್ತಿದೆ