Saavira Kambada Basadi ನೋಡಿದ್ದೀರಾ

ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿ 'ಸಾವಿರ ಕಂಬಗಳ ಬಸದಿ' ಎಂದೇ ಫೇಮಸ್

ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಸಾವಿರ ಕಂಬದ ಬಸದಿ ನೋಡೋದನ್ನು ಮಿಸ್ ಮಾಡಲ್ಲ

ಮೂಡುಬಿದಿರೆ ಪೇಟೆಯಿಂದ ಕೂಗಳತೆ ದೂರದಲ್ಲಿದ್ದರೂ ಶಾಂತವಾಗಿ ತಲೆ ಎತ್ತಿ ನಿಂತಿದೆ ಬಸದಿ

15ನೇ ಶತಮಾನದ ಸ್ಥಳೀಯ ಆಡಳಿತಗಾರನಾಗಿದ್ದ ದೇವರಾಯ ಒಡೆಯರ್ ಸಾವಿರ ಕಂಬದ ಬಸದಿ ನಿರ್ಮಾತೃ

ಫ್ರಾನ್ಸ್ ದೇಶದಿಂದ ತರಲಾದ ಟೈಲ್ಸ್, ಅಷ್ಟನಾರಿ ತುರಗ, ನವನಾರಿ ತುರಗಗಳು ಇಲ್ಲಿನ ವಿಶೇಷತೆ

ಸಾವಿರ ಕಂಬದ ಬಸದಿ ನಿರ್ಮಾಣಕ್ಕೆ 31 ವರ್ಷ ತಗುಲಿತ್ತು ಎಂದು ಹೇಳಲಾಗುತ್ತದೆ

ಎಂಟು ಅಡಿಯ ಚಂದ್ರನಾಥ ಸ್ವಾಮಿ ಇಲ್ಲಿನ ಪ್ರಧಾನ ದೇವರು

ಯಾವ ಬಸದಿಯಲ್ಲೂ ಕಾಣಸಿಗದ ಡ್ರಾಗನ್ಗಳು, ಜಿರಾಫೆ ಕೆತ್ತನೆಗಳು ಇಲ್ಲಿ ಕಾಣಸಿಗುತ್ತವೆ

ಮಂಗಳೂರಿನಿಂದ 35 ಕಿಲೋ ಮೀಟರ್ ದೂರದಲ್ಲಿರೋ ಬಸದಿಗೆ ತೆರಳಲು ಬೇಕಾದಷ್ಟು ಬಸ್ಗಳಿವೆ

ಮೂಡುಬಿದಿರೆ ಪೇಟೆ ತಲುಪಿದರೆ ಕೆಲವೇ ಮೀಟರ್ಗಳ ಅಂತರದಲ್ಲಿ ಸಾವಿರ ಕಂಬಗಳ ಬಸದಿ ಕಾಣಸಿಗುತ್ತದೆ