Bhagyavanti ದೇವಿಯ ದರ್ಶನ ತರಲಿದೆ ಅದೃಷ್ಟ!

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶ್ರೀ ಘತ್ತರಗಿಯ ಭಾಗ್ಯವಂತಿ ದೇವಿ ಅದೃಷ್ಟ ದೇವತೆಯಂತೆ

ದೇವಿಗೆ ಭಾಗಮ್ಮ ತಾಯಿ, ಘತ್ತರಗಿ ಭಾಗ್ಯವಂತಿ, ಆದಿಶಕ್ತಿ, ತ್ರಿಲೋಕ ಮಾತೆ ಎಂಬ ನಾನಾ ಹೆಸರುಗಳಿವೆ

ಭಾಗ್ಯವಂತಿ ದೇವಸ್ಥಾನಕ್ಕೆ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆಯಂದು ಭಕ್ತರ ದಂಡೇ ಹರಿದುಬರುತ್ತೆ

ದೇವಸ್ಥಾನಕ್ಕೆ ಹೋದ್ರೆ ದಾರಿದ್ರ್ಯವೆಲ್ಲ ದೂರವಾಗಿ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ ಎನ್ನುವುದು ಭಕ್ತರ ನಂಬಿಕೆ

ದೇವಸ್ಥಾನಕ್ಕೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ

ವಿಶೇಷ ಅಂದ್ರೆ ಭಾಗ್ಯವಂತಿ ದೇವಿ ವಿಜಯನಗರ ಸಾಮ್ರಾಜ್ಯದ ಆರಾಧ್ಯದೇವಿ

ಆದರೆ ಇದೇ ದೇವಿಯೇ ವಿಜಯನಗರದ ಅವನತಿಗೂ ಕಾರಣಳಾದಳು ಅನ್ನೋ ನಂಬಿಕೆ ಈಗ ಜನರಲ್ಲಿದೆ

ಭಾಗ್ಯವಂತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ದೇವಿಗೆ ಹರಕೆ ಹೊರುತ್ತಾರೆ

ಇಂದಿಗೂ ಸಹ ಸಹ ಕೋಟ್ಯಂತರ ಭಕ್ತರ ಆರಾಧ್ಯ ದೇವಿಯಾಗಿ ಭಾಗಮ್ಮ ತಾಯಿ ಸ್ಥಾನ ಪಡೆದಿದ್ದಾಳೆ