Half Ganapati:ಇಲ್ಲಿದೆ ಗಣಪನ ಅಪರೂಪದ ಮೂರ್ತಿ

ಗಣಪತಿ ಅಂದ್ರೆ ನೆನಪಿಗೆ ಬರೋದೇ ಆನೆ ಸೊಂಡಿಲಿನ ಮೊಗ, ನಾಲ್ಕು ಕೈ, ಎರಡು ದೊಡ್ಡದಾದ ಕಿವಿ

ಇಲ್ಲಿರೋ ಗಣಪತಿಗೆ ಸೊಂಡಿಲು, ಮುಖ, ಹೊಟ್ಟೆಭಾಗ ಎಲ್ಲವೂ ಇರೋದೇ ಅರ್ಧ

ಇಂತಹ ಗಣಪನ ಅಪರೂಪದ ಮೂರ್ತಿ ಕಾಣಸಿಗುವುದು ಉತ್ತರ ಕನ್ನಡದ ಶಿರಸಿಯ ಬನವಾಸಿಯಲ್ಲಿ

ಗಣಪತಿಗೆ ಒಂದು ಕಿವಿ, ಒಂದು ಕಾಲು ಹಾಗೂ ಎರಡು ಕೈಗಳಷ್ಟೇ ಇವೆ

ವಿಶೇಷ ಅಂದ್ರೆ ಅರ್ಧ ಶರೀರದ ಗಣಪತಿಯು ಬ್ರಹ್ಮಚರ್ಯದ ಪ್ರತೀಕ ಎಂದು ನಂಬಲಾಗಿದೆ

ಇಂತಹ ವಿಗ್ರಹ ಕರ್ನಾಟಕವಷ್ಟೇ ಅಲ್ದೇ ದಕ್ಷಿಣ ಭಾರತದಲ್ಲೇ ಅಪರೂಪ ಎನ್ನಲಾಗಿದೆ

ಗಣಪನಿಗೆ ಏಕಕಾಲದಲ್ಲಿ ಮಾತ್ರ ಪೂಜೆ ಜರುಗುತ್ತದೆ

ಬೆಳಗ್ಗೆ ಗಣಪನಿಗೆ ಪೂಜೆ ಮಾಡಿ ದೇವಾಲಯದ ಬಾಗಿಲು ಮುಚ್ಚಿದ್ರೆ ಮತ್ತೆ ತೆರೆಯುವುದು ಮಾರನೇ ದಿನ ಬೆಳಗ್ಗೆ

ಆದ್ರೆ ಇಲ್ಲಿ ಗರ್ಭಗುಡಿಗೆ ಬಾಗಿಲಿಲ್ಲವಾದ್ದರಿಂದ ದರ್ಶನ ಯಾವಾಗ ಬೇಕಿದ್ದರೂ ಸಾಧ್ಯವಾಗುತ್ತೆ