Shivaratriಗೆ ಶೇಂಗಾದಿಂದ ತಯಾರಾಯ್ತು ಶಿವಲಿಂಗ

ಬಿಸಿಲನಾಡು ಕಲಬುರಗಿ ಮಹಾಶಿವರಾತ್ರಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ

ಬ್ರಹ್ಮಕುಮಾರಿ ವಿವಿಯ ಅಮೃತ ಸರೋವರ ಆವರಣದಲ್ಲಿ ಆರ್ಕಷಕ ಬೃಹತ್ ಶಿವಲಿಂಗ ಸಿದ್ಧವಾಗಿದೆ

ಬ್ರಹ್ಮಕುಮಾರಿ ಆಶ್ರಮದಲ್ಲಿ ಬಾರಿ ಶೇಂಗಾದಿಂದ ಬೃಹತ್ ಶಿವಲಿಂಗವನ್ನು ತಯಾರಿಸಲಾಗಿದೆ

ಹಿಂದೆ ತೆಂಗಿನಕಾಯಿ, ತೊಗರಿ ಕಣಜ, ಮುತ್ತು, ಅಡಿಕೆ ಹೀಗೆ ನಾನಾ ರೀತಿಯ ಶಿವಲಿಂಗ ತಯಾರಿಸಲಾಗಿತ್ತು

ಬಾರಿ ಶೇಂಗಾವನ್ನು ಬಳಸಿ ಸ್ವತಃ ಆಶ್ರಮ ವಾಸಿಗಳೇ ಆಕರ್ಷಕ ಶಿವಲಿಂಗ ನಿರ್ಮಿಸಿದ್ದಾರೆ

8 ಕ್ವಿಂಟಲ್ ಶೇಂಗಾ ಕಾಳು ಬಳಸಿ ಅರಿಶಿನ, ಕುಂಕುಮದ ಬಣ್ಣ ಬಳಿದು ಶಿವಲಿಂಗವನ್ನು ಸಿದ್ದಪಡಿಸಲಾಗಿದೆ

ಇದರ ಜೊತೆಗೆ ಆಶ್ರಮದ ಪ್ರಾಂಗಣದಲ್ಲಿ ಸಿರಿಧ್ಯಾನ ಸೇರಿ 12 ಜೋತಿರ್ಲಿಂಗ ತಯಾರಿಸಲಾಗಿದೆ

ಇಲ್ಲಿ ನಾಣ್ಯ, ಕಲ್ಲುಸಕ್ಕರೆ, ಗೊಂಡಂಬಿ, ಸಿರಿಧಾನ್ಯ ಹೀಗೆ ಡಿಫರೆಂಟ್ ಆಗಿರುವ ಚಿಕ್ಕಗಾತ್ರದ ಶಿವಲಿಂಗಗಳೂ ಇವೆ

ಶೇಂಗಾ ಕಾಳಿನ ಶಿವಲಿಂಗದ ದರ್ಶನಕ್ಕೆ ಫೆ.18ರಿಂದ ಹತ್ತು ದಿನಗಳ ಕಾಲ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ