200 KG ತೂಕದ ದೈತ್ಯ ಮೀನಿದು
ಪಶ್ಚಿಮ ಬಂಗಾಳದ ದಿಘಾದಲ್ಲಿ ಸುಮಾರು 200 ಕೆಜಿ ತೂಕದ ದೈತ್ಯ ಮೀನು ಪತ್ತೆಯಾಗಿದೆ
ಹರಾಜು ಹಾಕುವ ಸ್ಥಳಕ್ಕೆ ಈ ಮೀನನ್ನು ನೋಡಲು ಬಹಳಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ
ಭಾರತದ ಪೂರ್ವ ಭಾಗದಲ್ಲಿ ದಿಘಾದಲ್ಲಿ ಮೋಹನ ಹರಾಜು ಸ್ಥಳವು ಬಹು ದೊಡ್ಡದಾಗಿದೆ
ಇದು ಮೊದಲೇನಲ್ಲ, ಈ ಹಿಂದೆ ಕೂಡಾ ಈ ಸ್ಥಳಕ್ಕೆ ದೊಡ್ಡ ಗಾತ್ರದ ಮೀನುಗಳು ಮಾರಾಟಕ್ಕೆ ಬಂದಿವೆ
ಈ ಬಾರಿ ಸುಮಾರು 200 ಕಿಲೋಗ್ರಾಂ ತೂಕದ ಕೋಯಿ ಭೆಟ್ಕಿ ಎಂಬ ಮೀನು ಮಾರಾಟಕ್ಕೆ ಬಂದಿದೆ
ಈ ಮೀನನ್ನು ಖರೀದಿಸಲು ವಿವಿಧ ಸ್ಥಳಗಳಿಂದ ವ್ಯಾಪಾರಿಗಳು ಬಂದಿದ್ದರು
ಕೊನೆಗೂ ಹಾರಾಜಿನಲ್ಲಿ ಈ ಮೀನು 38 ಸಾವಿರ ರೂಪಾಯಿಗಳಿಗೆ ಮಾರಾಟವಾಯಿತು
ಬಸಿರ್‍ಹತ್‍ನ ಮೀನುಗಾರಿಕಾ ಕಂಪೆನಿಯು ಹರಾಜಿನಲ್ಲಿ ಈ ಮೀನನ್ನು ಖರೀದಿಸಿದೆ
ಈ ಮೀನು ಸಮುದ್ರದ ಆಳದಲ್ಲಿ ಸಿಗುತ್ತದೆ ಎನ್ನುತ್ತಾರೆ ಮೀನುಗಾರರು