ಈ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ.

ಆಕಾಲಕ್ಕೇ ಇಲ್ಲಿಗೆ ಆಗಮಿಸಿದ್ದ ದತ್ತಾತ್ರೇಯರು ಈಗಲೂ ಪಾದುಕೆಯಲ್ಲಿ ಗುಪ್ತವಾಗಿದ್ದಾರೆ ಅನ್ನೋ ನಂಬಿಕೆಯಿದೆ.

ಈ ಮಂದಿರದಲ್ಲಿ ಪಾದುಕೆ ಪೂಜೆಗೆ ಎಲ್ಲಿಲ್ಲದ ಮಹತ್ವವಿದೆ.

ದತ್ತ ಪಾದುಕೆ ದರ್ಶನಕ್ಕಾಗಿಯೇ ದೇಶದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬರುತ್ತೆ.

ಈ ಪವಿತ್ರ ಸನ್ನಿಧಿಯಲ್ಲಿ ವರ್ಷಕ್ಕೆ ಎರಡು ಬಾರಿ ಉತ್ಸವಗಳು ನಡೆಯುತ್ತೆ.

ದತ್ತಾತ್ರೇಯ ಜಯಂತಿ ದಿನ ಒಮ್ಮೆ ಉತ್ಸವ ನಡೆದ್ರೆ, ಮತ್ತೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತೆ. 

ಜಯಂತಿ ಉತ್ಸವ ದಿನವಂತೂ ಸರ್ವಾಲಂಕಾರ ಭೂಷಿತ ತೊಟ್ಟಿಲು ತೂಗಿ ಬಿಡಲಾಗುತ್ತೆ.

ಎತ್ತರದಲ್ಲಿರೋ ಆ ತೊಟ್ಟಿಲಿಗೆ ಕ್ಷೇತ್ರಕ್ಕೆ ಬಂದ ಭಕ್ತರು ಹೂಮಳೆಗರೆದು ಸಂಭ್ರಮಿಸ್ತಾರೆ.

 ಹೀಗೆ ಮಾಡೋದ್ರಿಂದ ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ ಅನ್ನೋ ನಂಬಿಕೆಯಿದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ದತ್ತನ ಕ್ಷೇತ್ರದಲ್ಲಿ ಬಾಲ ದತ್ತ ಮಗುವಿಗೆ ಕಾಕಡಾರತಿ, ಮಹಾನ್ಯಾಸ, ಹಾಲಿನ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತವೆ.