Lakkundi Utsava 2023 ಕಣ್ಣಾರೆ ನೋಡಿ ಬನ್ನಿ
ಗದಗ ಜಿಲ್ಲಾ ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಲಕ್ಕುಂಡಿಗೆ ಪೌರಾಣಿಕವಾಗಿ, ಐತಿಹಾಸಿಕವಾಗಿ ವಿಶೇಷ ಸ್ಥಾನವಿದೆ
ವಿವಿಧ ಅರಸು ಮನೆತನಗಳ ಆಳ್ವಿಕೆಗೊಳಪಟ್ಟಿದ್ದ ಲಕ್ಕುಂಡಿ ಬೆಳ್ವಲ ಆಡಳಿತಕ್ಕೆ ಸೇರಿತ್ತು
ಲಕ್ಕುಂಡಿಯಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನ ಹಾಗೂ ಬಾವಿಗಳು ಇದ್ದವು ಎಂಬ ಪ್ರತೀತಿಯಿದ್ದರೂ ಈಗ ಕೆಲವು ದೇವಸ್ಥಾನಗಳು ಮಾತ್ರ ಕಾಣಸಿಗುತ್ತವೆ
ದಾನ ಚಿಂತಾಮಣಿ ಅತ್ತಿಮಬ್ಬೆ ನಿರ್ಮಿಸಿದ ಬ್ರಹ್ಮ ಜಿನಾಲಯ ನವರಂಗ ಮುಖ್ಯಮಂಟಪ ಹೊಂದಿದ್ದು ಸುಂದರ ಶಿಲೆಯ ಕುಸುರಿ ಗಮನ ಎಲ್ಲರ ಸೆಳೆಯುತ್ತದೆ
ಲಕ್ಕುಂಡಿ ನೆಲದಲ್ಲಿ ಟಂಕಶಾಲೆಯಿದ್ದು ಅಲ್ಲಿ ತಯಾರಾದ ನಾಣ್ಯಗಳಿಗೆ ಲೊಕ್ಕಿಗದ್ಯಾಣ ಹಾಗೂ ಲೊಕ್ಕಿನಿಷ್ಟ ಎಂದು ಕರೆಯಲಾಗುತ್ತಿತ್ತು
ಇಲ್ಲಿರುವ ಬಾವಿಗಳು ಹಾಗೂ ಶಾಸನಗಳು ವಾಸ್ತು ಶಿಲ್ಪದ ಜಾಣ್ಮೆಯನ್ನು ಬಿಂಬಿಸುತ್ತವೆ
ಲಕ್ಕುಂಡಿಯ ಸುತ್ತಮುತ್ತಲೂ ಸೇವಂತಿಗೆ, ಮಲ್ಲಿಗೆ , ಕನಕಾಂಬರಿ ಹೂವುಗಳನ್ನು ಬೆಳೆಯುತ್ತಿದ್ದು ನೆರೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಸಹ ಬೇಡಿಕೆಯಿದೆ
ಫೆಬ್ರುವರಿ 10,11,12 ಮೂರು ದಿನಗಳ ಕಾಲ ಲಕ್ಕುಂಡಿ ಉತ್ಸವ ಜರುಗಲಿದೆ
ಹಿಂದಿನ ಪೀಳಿಗೆಯ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಲಕ್ಕುಂಡಿ ಉತ್ಸವದ ಉದ್ದೇಶವಾಗಿದೆ