ನಾಗರಹಾವು ರಸ್ತೆ ದಾಟಲು ಹೆದ್ದಾರಿಯೇ ಅರ್ಧ ಗಂಟೆ ಬಂದ್!
ಸುಮಾರು 6 ಅಡಿ ಉದ್ದ ನಾಗರಹಾವಿನಿಂದ ಸುಮಾರು ಅರ್ಧ ಗಂಟೆ ಕಾಲ ವಾಹನ ಸವಾರರು ಪರದಾಡುವಂತಾಯಿತು.
ದಾರಿ ತಪ್ಪಿ ಬಂದಿತ್ತು ನೋಡಿ ನಾಗರಹಾವು ಹೈವೇ ಮಧ್ಯೆ.
ಘನ ವಾಹನಗಳ ಹಾರ್ನ್ ಆರ್ಭಟಕ್ಕೆ ನಲುಗಿಹೋಗಿತ್ತು ಕೋಬ್ರಾ.
ಉತ್ತರ ಕನ್ನಡದ ಹೊಳೆಗದ್ದೆ ಟೋಲ್ ಹತ್ತಿರ ಹೆದ್ದಾರಿಗೆ ನುಗ್ಗಿದ್ದ ನಾಗರಹಾವು ಕೆಲ ಕಾಲ ಆತಂಕದ ಪರಿಸ್ಥಿತಿ ಎದುರಿಸಿತು.
ಅರ್ಧ ಗಂಟೆ ಹೆದ್ದಾರಿ ಬಂದ್ ಮಾಡಿದ್ದ ನಾಗರಹಾವು
ನಾಗರಹಾವಿನ ಮಧ್ಯಪ್ರವೇಶದಿಂದ ಘನ ವಾಹನಗಳಂತೂ ಹೋಗಲಾರದೆ ಕಂಗಾಲಾದವು.
ಸ್ಥಳಕ್ಕೆ ಧಾವಿಸಿ ಬಂದ ಸ್ನೇಕ್ ಪವನ್ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು.
ವಾಹನಗಳ ಕಿರಿಕಿರಿಯಿಂದ ಕೊನೆಗೂ ಸಿಕ್ತು ನೋಡಿ ನಾಗರಾಜನಿಗೆ ಮುಕ್ತಿ.
ಹಾವು ನಿಟ್ಟುಸಿರು ಬಿಟ್ಟರೆ, ಇತ್ತ ವಾಹನ ಸವಾರರು ನಿರಾಳರಾದರು.