ಉದ್ಯಾನವನದಲ್ಲಿದೆ ಹಸಿರು ಬಣ್ಣದ ಪ್ರಾಣಿಗಳು!

ವ್ಯಾಘ್ರ ಪ್ರಾಣಿಗಳಿಂದ ಹಿಡಿದು ಸಾಧು ಪ್ರಾಣಿಗಳವರೆಗೂ ಎಲ್ಲವೂ ಹಚ್ಚ ಹಸಿರ ಗಾರ್ಡನ್ನಲ್ಲಿದೆ

ಒಂದೆಡೆ ತಲೆ ಎತ್ತಿ ನೋಡುತ್ತಿರುವ ಜಿರಾಫೆ, ಮತ್ತೊಂದೆಡೆ ದೂರದಿಂದ ಘರ್ಜಿಸುತ್ತಿರುವ ಸಿಂಹ

ಒಂದೆಡೆ ಬೇಟೆಯಾಡಲು ಕಾದು ಕುಳಿತ ಮೊಸಳೆ, ಇನ್ನೊಂದೆಡೆ ಹುಲ್ಲು ಮೇಯುತ್ತಿರುವ ಮೊಲ

ಒಂದೆಡೆ ಮರಿಗಳೊಂದಿಗೆ ಸುತ್ತಾಡುತ್ತಿರುವ ಆನೆ, ಮತ್ತೊಂದೆಡೆ ದೂರದಲ್ಲಿ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು

ಇವುಗಳೆಲ್ಲವೂ ಕಾಣ ಸಿಗೋದು ವಿಜಯಪುರದ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ಉದ್ಯಾನವನದಲ್ಲಿ

ಗಿಡ, ಬಳ್ಳಿಗಳಿಂದ ಪ್ರಾಣಿ-ಪಕ್ಷಿಯ ರೂಪ ಪಡೆದ ಇವುಗಳೆಲ್ಲವೂ ಆಲಮಟ್ಟಿ ಉದ್ಯಾನವನದಲ್ಲಿ ಕಾಣ ಸಿಗುತ್ತದೆ

ಟೋಪಿಯರಿ ವಿಧಾನದಲ್ಲಿ ಇಲ್ಲಿ ಪ್ರಾಣಿ ಪಕ್ಷಿಗಳು ತಲೆ ಎತ್ತಿ ನಿಂತಿದ್ದು ಅತ್ಯಂತ ಆಕರ್ಷಕವಾಗಿದೆ

ಒಂದು ಎಕರೆ ಪ್ರದೇಶದಲ್ಲಿ ಟೋಪಿಯರಿ ಉದ್ಯಾನದಲ್ಲಿ ಸರಿ ಸುಮಾರು 90ಕ್ಕೂ ಹೆಚ್ಚು ಆಕೃತಿಗಳು ಇಲ್ಲಿವೆ

ಜನರ ಮನ ಸೆಳೆಯುವ ಗುಮ್ಮಟ ನಗರಿಯ ಉದ್ಯಾನವನ ಇದೀಗ ಪ್ರವಾಸಿಗರ ಹಾಟ್ ಫೇವರಿಟ್ ಆಗಿದೆ