ಹಳ್ಳಿ ಹಳ್ಳಿಯಲ್ಲಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ಧಾರೆ ವಿಜಯಪುರದ ಈ ಉರಗ ರಕ್ಷಕ.

ಇವರ ಹೆಸ್ರು ಸ್ನೇಕ್ ಉಮೇಶ್ ಅಂತ

ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಗ್ರಾಮದ ಪದವೀಧರ ಯುವಕ ಉಮೇಶ್.

ಪದವೀಧರ ಯುವಕನ ಹಾವು ಪ್ರೇಮ! ಇವ್ರು ವಿಷ ಸರ್ಪಗಳನ್ನೂ ಪಳಗಿಸುವ ನಿಪುಣ

ಎಲ್ಲೇ ಹಾವು ಕಂಡರೂ ಮಾಹಿತಿ ಸಿಕ್ಕ ತಕ್ಷಣ ಅಲ್ಲಿಗೆ ತೆರಳಿ ರಕ್ಷಿಸುತ್ತಾರೆ.

ಉಮೇಶ್ ಅವರು ಇದುವರೆಗೆ 981 ಹಾವುಗಳನ್ನ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.

ಉಮೇಶ್ ಅವರು ಹಾವು ಕಚ್ಚಿದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆಯೂ ಮಾಹಿತಿ ನೀಡುತ್ತಾರೆ.

ಕಳೆದೊಂದು ವರ್ಷದಿಂದ ಹಾವುಗಳನ್ನ ರಕ್ಷಣೆ ಮಾಡುತ್ತಾ ಬಂದಿದ್ದಾರೆ ಸ್ನೇಕ್ ಉಮೇಶ್.

ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಂದಾಜು 25 ರಿಂದ 30 ಜಾತಿಯ ಹಾವುಗಳಿವೆ.

ಉಮೇಶ್ ಅವರು ಹಾವುಗಳ ಸಂತತಿ ಬೆಳೆಯಲು ನಿರ್ಭೀತ ವಾತಾವರಣವನ್ನ ಹುಟ್ಟು ಹಾಕುತ್ತಿದ್ದಾರೆ.