Gokarnaದ ಕೋಟಿತೀರ್ಥಕ್ಕಿದೆ ಅಪಾರ ಮಹಿಮೆ!

ಅಗಲಿದ ಆತ್ಮಗಳಿಗೆ ಚಿರಶಾಂತಿ ಕಲ್ಪಿಸೋ ತಾಣ ಗೋಕರ್ಣ

ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಸಾವನ್ನಪ್ಪಿದ ಯಾರೇ ಇದ್ರೂ ಅವರ ಕುಟುಂಬಿಕರು ಆ ಆತ್ಮಕ್ಕೆ ಮುಕ್ತಿ ಕಲ್ಪಿಸುವುದು ಮುಖ್ಯ

ಹೀಗಾಗಿ ಉತ್ತರ ಕನ್ನಡದ ಗೋಕರ್ಣಕ್ಕೆ ಆಸ್ತಿಕರು ಬರುವುದು ಸಹಜ

ಹೀಗೆ ಬಂದವರು ಅಲ್ಲಿಯ ಅರ್ಚಕರ ಸಹಕಾರದಿಂದ ಶಾಸ್ತ್ರೋಕ್ತ ಕ್ರಮಗಳನ್ನ ಪಾಲಿಸುತ್ತಾರೆ

ಈ ಮೂಲಕ ತಮ್ಮನ್ನು ಅಗಲಿದ ಕುಟುಂಬಿಕರಿಗೆ ಮುಕ್ತಿ ಕಲ್ಪಿಸಿ ತಾವು ನೆಮ್ಮದಿಯಿಂದ ಇರಲು ಕಾರಣರಾಗುತ್ತಾರೆ

ಈ ಕಾರ್ಯಗಳ ಮೂಲಕ ಮೋಕ್ಷ ಪ್ರಾಪ್ತಿ ಕಲ್ಪಿಸಿದ ನಿಟ್ಟುಸಿರ ಜೊತೆಗೆ ಭಕ್ತರು ಹಿಂದಿರುಗುತ್ತಾರೆ

ಅತ್ಯಧಿಕ ಸಂಖ್ಯೆಯಲ್ಲಿ ಪಿಂಡ ಪ್ರದಾನ ಕಾರ್ಯ ಇಲ್ಲಿನ ಕೋಟಿತೀರ್ಥ ತಟಾಕ ಹಾಗೂ ಸಮುದ್ರ ದಂಡೆಯಲ್ಲಿ ನಡೆಯುತ್ತಿದೆ

ಉತ್ತರಾಯಣ ಪುಣ್ಯಕಾಲ ಪಿತೃಪಕ್ಷದ ದಿನಗಳಷ್ಟೇ ಮಹತ್ವವನ್ನು ಹೊಂದಿದೆ ಎನ್ನುತ್ತಾರೆ ಪಂಡಿತರು

ಗೋಕರ್ಣಕ್ಕೆ ತೆರಳುವ ಪ್ರವಾಸಿಗರು ಕೋಟಿತೀರ್ಥ ತೀರದ  ಕ್ರಿಯಾಮಂಟಪದ ಒಳಗೆ ಕಾಲಿಟ್ಟರೆ ಹೊಸ ಜಗತ್ತಿನ ಪರಿಚಯವಾಗುತ್ತದೆ ಅನ್ನೋದು ಅಕ್ಷರಶಃ ಸತ್ಯ