ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ!
ಮೀನುಗಾರರು, ತೋಟಗಾರರು, ಹಾಲಕ್ಕಿ ಗೌಡರು, ಬಡ ಕಾರ್ಮಿಕರು ಎಲ್ಲರಿಗೂ ಈಕೆ ತಾಯಿ.
ರಾಜಕಾರಣಿಗಳಿಗೆ, ಉದ್ಯೋಗಿಗಳಿಗೆ, ಸಿರಿವಂತರಿಗೆ ಎಲ್ಲರಿಗೂ ಸೌಭಾಗ್ಯದಾಯಿನಿ ಎಂದೇ ಬಂಗಾರಮ್ಮ ದೇವಿ ಪ್ರಸಿದ್ಧಿ.
ಶಾಂತವಾಗಿ ಹರಿಯುತ್ತಿರೋ ಅಘನಾಶಿನಿ ನದಿ. ದಡದಲ್ಲಿ ಗುಡಿ, ಗೋಪುರವಿಲ್ಲದೇ ನೆಲೆಯಾಗಿರುವ ಆರಾಧ್ಯ ದೇವತೆ.
ಬಡವರ ಪಾಲಿಗೆ ಬಂಗಾರವನ್ನೇ ನೀಡ್ತಿದ್ದ ಈ ತಾಯಿಯೇ ಬಂಗಾರಮ್ಮ ದೇವಿ.
ಬಡ ಜನರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಈ ದೇವಿಯ ಆಭರಣಗಳನ್ನು ಊರು ಮಕ್ಕಳ ಮದುವೆಗೆ ಬಳಸಲಾಗುತ್ತಿತ್ತಂತೆ.
ಒಂದು ಬಾರಿ ದೇವರಿಗೆ ಅಪಚಾರ ಮಾಡಿದ್ದಕ್ಕೆ ದೇವರ ಆಭರಣ ಹೊರಗಡೆ ಹೋಗುವುದು ನಿಂತಿದೆ.
ಈಗಲೂ ಮಕ್ಕಳಾಗದವರ ಬೆಳ್ಳಿ ತೊಟ್ಟಿಲು ಕೊಟ್ಟು ಸಂತಾನ ಫಲ ಪಡೆದ ಉದಾಹರಣೆಗಳು ಇವೆಯಂತೆ.
ಪ್ರತಿ ಸಂಕ್ರಾಂತಿಯಂದು ಇಲ್ಲಿ ಹಬ್ಬವಿರುತ್ತವೆ. ಪ್ರತೀ ಕಾರ್ತಿಕಕ್ಕೆ ರಂಗಪೂಜೆ ಮಾಡುತ್ತಾರೆ.
ಇಲ್ಲಿಗೆ ಆಗಮಿಸಿ ಬಂಗಾರಮ್ಮ ದೇವಿ ದರ್ಶನ ಪಡೆದ್ರೆ ಬಾಳು ಬಂಗಾರವಾಗುತ್ತೆ ಅನ್ನೋ ನಂಬಿಕೆಯಿದೆ.