ಸಂಕಷ್ಟ ತಂದ ನವಿಲುಗರಿಯ ಹಾರ!

ನಾಯಕರಿಗೆ  ಬಗೆ ಬಗೆಯ ಹಾರ ಹಾಕುವ ಟ್ರೆಂಡ್ ರಾಜ್ಯದಲ್ಲಿ ಸೃಷ್ಟಿಯಾಗಿದೆ

ಪಂಚರತ್ನ ರಥಯಾತ್ರೆ ವೇಳೆ ಕುಮಾರಸ್ವಾಮಿಗೆ ಆಯಾ ಭಾಗದ ವಿಶೇಷತೆಯೊಂದಿಗೆ ಬೃಹತ್ ಹಾರ ಸಿದ್ಧವಾಗುತ್ತಿತ್ತು

ಕಾರ್ಯಕರ್ತರು ತಮ್ಮೂರಿಗೆ ಪ್ರಚಾರಕ್ಕೆ ಬರುತ್ತಿರುವ ನಾಯಕರಿಗೆ ಬಗೆ ಬಗೆಯ ಹಾರ ಹಾಕಿ ಸ್ವಾಗತಿಸುತ್ತಿದ್ದಾರೆ

ಇದೇ ಪ್ರೀತಿ ಕರ್ನಾಟಕ ಸರ್ವೋದಯ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯಗೆ ಸಂಕಷ್ಟ ತಂದೊಡ್ಡಿದೆ

ದರ್ಶನ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಮತಬೇಟೆಗೆ ಮುಂದಾಗಿದ್ದಾರೆ

ಮಾರ್ಚ್​ 12ರಂದು ವಿಶ್ವೇಶ್ವರಯ್ಯ ನಗರದ ಫ್ಯಾನ್ಸ್ ನವಿಲುಗರಿಗಳಿಂದ ಸಿದ್ಧಪಡಿಸಲಾಗಿದ್ದ ಹಾರ ಹಾಕಿದ್ದರು

ನವಿಲುಗರಿಯ ಹಾರದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು

ಫೋಟೋ ವೈರಲ್ ಬೆನ್ನಲ್ಲೇ ಅರಣ್ಯ ಇಲಾಖೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನೋಟಿಸ್ ಜಾರಿಗೊಳಿಸಿದೆ

ಹಾರವನ್ನ ಪರಿಶೀಲನೆಗೆ ನೀಡುವಂತೆ ದರ್ಶನ್ ಪುಟ್ಟಣ್ಣಯ್ಯಗೆ ಸೂಚನೆ ನೀಡಲಾಗಿದೆ

ರಾಷ್ಟ್ರೀಯ ಪಕ್ಷಿಯ ಗರಿ ಬಳಸಿ ಹಾರ ಸಿದ್ಧಪಡಿಸಿರೋದು ಕಾನೂನು ವಿರೋಧಿ ಕಾರ್ಯವಾಗಿದೆ