ಇದು ಕರ್ನಾಟಕದ ಮೊದಲ ರಿಮೋಟ್ ಕಂಟ್ರೋಲ್ ರಥ!
ಸತತ 2 ವರ್ಷಗಳ ಪರಿಶ್ರಮದಿಂದ ಈ ನೂತನ ರಥವನ್ನು ಸಿದ್ಧಪಡಿಸಲಾಗಿದೆ.
ದಾವಣಗೆರೆಯಲ್ಲಿ ಸಂಭ್ರಮ ಸಡಗರದಿಂದ ಆರಂಭವಾದ ವಾಲ್ಮೀಕಿ ಜಾತ್ರೆ
ನೂರಾರು ಜನರ ನಡುವೆ ಸಾಗುತ್ತಿರೋ ಭವ್ಯ ರಥ
ಕರ್ನಾಟಕದ ಜಾತ್ರೆಗಳಲ್ಲಿ ಎಲ್ಲ ರಥಗಳನ್ನೂ ಭಕ್ತರೇ ಎಳೆಯಬೇಕಾಗುತ್ತೆ, ಆದ್ರೆ ಈ ರಥವನ್ನ ಯಾರೂ ಎಳೆಯಬೇಕಂತಿಲ್ಲ!
ಜಾತ್ರೆಯಲ್ಲಿ ಸಂಚರಿಸುತ್ತಿರೋ ಈ ರಿಮೋಟ್ ಕಂಟ್ರೋಲ್ ರಥ ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.
2 ಕೋಟಿ 15 ಲಕ್ಷದಲ್ಲಿ ತಯಾರಾದ ವಾಲ್ಮೀಕಿ ರಥದ ಸುತ್ತಲೂ ವಾಲ್ಮೀಕಿ ರಚಿತ ರಾಮಾಯಣ ಚಿತ್ರಗಳಿವೆ.
63 ಅಡಿ ಎತ್ತರದ 6 ಚಕ್ರದ ರಥ ಇದಾಗಿದ್ದು ರಿಮೋಟ್ ಕಂಟ್ರೋಲ್ ಮೂಲಕ ಚಲಿಸುತ್ತೆ ಅನ್ನೋದೇ ವಿಶೇಷವಾಗಿದೆ.
ವಿದ್ಯುತ್ ಚಾಲಿತ ಯಂತ್ರ ಹೊಂದಿರುವ ಈ ರಥ ರಿಮೋಟ್ ಮೂಲಕ ಚಲಿಸುತ್ತದೆ.
ಸತತ 2 ವರ್ಷಗಳ ಪರಿಶ್ರಮದಿಂದ ಈ ನೂತನ ರಥವನ್ನು ಸಿದ್ಧಪಡಿಸಲಾಗಿದೆ.