ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!
ಉತ್ತರ ಕನ್ನಡದ ಯಲ್ಲಾಪುರದಲ್ಲಿ ರೋಚಕ ಕಾರ್ಯಾಚರಣೆ!
ಈ ಬಾವಿಗೆ ಬಿದ್ದಿರೋದು ಮನುಷ್ಯರಲ್ಲ, ಪುಟ್ಟ ಪುಟಾಣಿ ಬೆಕ್ಕು!
ಮುದ್ದಾದ ಬೆಕ್ಕಿನ ಮರಿಯೊಂದು 60 ಅಡಿ ಆಳದ ಬಾವಿಯಲ್ಲಿ ಬಿದ್ದು ಒದ್ದಾಡುತ್ತಿತ್ತು.
ಅಕ್ಕಪಕ್ಕದ ಮನೆಯವರು ಬೆಕ್ಕಿನ ಮರಿಯನ್ನು ರಕ್ಷಿಸುವಂತೆ ಅಗ್ನಿಶಾಮಕ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಬಾವಿಯಲ್ಲಿ ಬಿದ್ದ ಬೆಕ್ಕಿನ ಮರಿಯನ್ನು ಯಲ್ಲಾಪುರ ಅಗ್ನಿಶಾಮಕ ದಳದವರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸದ್ಯ ಈ ಅಗ್ನಿಶಾಮಕದ ಸಿಬ್ಬಂದಿ ಬೆಕ್ಕಿನ ಮರಿ ರಕ್ಷಿಸಿರೋದು ವೈರಲ್ ಆಗಿದೆ.
ಬಾವಿಯಲ್ಲಿ ಬಿದ್ದ ಮುದ್ದು ಬೆಕ್ಕಿನ ಮರಿ ಈಗ ಪಾರಾಗಿದೆ
ಬೆಕ್ಕಿನ ಮರಿಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಶ್ಲಾಘನೆ ವ್ಯಕ್ತವಾಗಿದೆ
ಒಟ್ಟಾರೆ ಈ ಘಟನೆ ಭಾರೀ ವೈರಲ್ ಆಗಿದೆ