ಯೂರೋಪಿಯನ್ ರಣಹದ್ದು ಮರಳಿ ಮನೆ ಸೇರಿದೆ
ಡಿಸೆಂಬರ್ ತಿಂಗಳಿನಲ್ಲಿ ಹೊಸಪೇಟೆಯ ರಾಣಿಪೇಟೆಯಲ್ಲಿ ಯೂರೇಷಿಯನ್ ಗ್ರಿಫನ್ ಜಾತಿಯ ರಣಹದ್ದೊಂದು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ಈ ರಣಹದ್ದನ್ನು ರಕ್ಷಿಸಿ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕಿಗೆ ಹಸ್ತಾಂತರ ಮಾಡಿದ್ದರು.
ಇದೀಗ ರಣಹದ್ದು ಗುಣಮುಖವಾಗಿದೆ.
ಸದ್ಯ ಆರೋಗ್ಯವಾದ ರಣಹದ್ದನ್ನು ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾರಿಬಿಡಲಾಗಿದೆ.
ಬೃಹತ್ ಗಾತ್ರದ ಪಕ್ಷಿಯ ಎತ್ತರ, ಗಾತ್ರ, ತೂಕ, ಗರಿಗಳ ಬಣ್ಣ, ಮುಂತಾದ ಗುಣ, ಬಣ್ಣವನ್ನು ಪರೀಕ್ಷಿಸಲಾಗಿದೆ.
ಒಂದು ವರ್ಷದ ಯೂರೋಪಿಯನ್ ಗ್ರಿಫನ್ ಎಂಬ ರಣಹದ್ಧು ಎಂದು ತಿಳಿದುಬಂದಿದೆ.
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಟ್ಟದ ಮೇಲೆ ಹಾರಾಡಿದ ರಣಹದ್ಧು ಉತ್ತರ ದಿಕ್ಕಿನ ಕಡೆ
ಹಾರಿ ಕಣ್ಮರೆಯಾಗಿದೆ
ಈ ರಣಹದ್ದಿನ ಕಾಲಿಗೆ ವಿಶೇಷ ಗುರುತಿನ ನೀಲಿ ಬಣ್ಣ ಉಂಗುರವನ್ನು ಹಾಕಲಾಗಿದೆ.
ಉಂಗುರದ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಸಿಯು, ಸಿಯು ಎಂದು ಮುದ್ರಿಸಲಾಗಿದೆ.