ಡ್ರ್ಯಾಗನ್ ಬೋಟ್ ರೇಸ್ ಚಾಂಪಿಯನ್ಶಿಪ್
ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೇರೂರು ಸೇತುವೆ ಭಾರೀ ಸುದ್ದಿಯಲ್ಲಿದೆ.
ಈ ಬಾರಿ ಮಡಿಸಾಲು ಹೊಳೆಯಲ್ಲಿ ಡ್ರ್ಯಾಗನ್ ಬೋಟ್ ರೇಸ್ ಚಾಂಪಿಯನ್ಶಿಪ್ ನಡೆದಿದೆ.
ಬೋಟ್ ರೇಸ್ ನೋಡೋಕೆ ಕೇರಳಕ್ಕೇ ಹೋಗ್ಬೇಕಂತಿಲ್ಲ, ನಮ್ಮ ಉಡುಪಿಗೆ ಬಂದರೆ ಸಾಕು
ಅನ್ನೋದು ಜನರ ಮಾತಾಗಿದೆ
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಡ್ರಾಗನ್ ಬೋಟ್ ಚಾಂಪಿಯನ್ ಶಿಪ್ ನಡೆದದ್ದು.
ಈ ಕಾರಣದಿಂದ ಸ್ಪರ್ಧಾಳುಗಳು ಭಾರೀ ಉತ್ಸಾಹದಲ್ಲಿ ಭಾಗವಹಿಸಿದರು.
ಒಟ್ಟು 15 ರಾಜ್ಯಗಳಿಂದ 600 ಸ್ಪರ್ಧಿಗಳು ರೋಚಕವಾಗಿ ಭಾಗವಹಿಸಿದರು.
ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ 200 ಮೀಟರ್,
500 ಮೀಟರ್ ಹಾಗೂ 2000 ಮೀಟರ್ ಸ್ಪರ್ಧೆಗಳು ನಡೆಯಲಿದ್ದು ಉಡುಪಿ ಜನರ ಪಾಲಿಗೆ ಖುಷಿಗೆ ಕಾರಣವಾಗಿದೆ.