Karnataka ಎಳನೀರಿಗೆ ಫುಲ್ ಡಿಮ್ಯಾಂಡ್!

ರಾಜ್ಯದ ಎಳನೀರಿಗೆ ಉತ್ತರ ಭಾರತದಲ್ಲಿ ಭಾರೀ ಬೇಡಿಕೆ

ರಾಜ್ಯದಿಂದ ಪ್ರತಿ ದಿನ 20 ಲಕ್ಷಕ್ಕೂ ಅಧಿಕ ಕಾಯಿಗಳು ಹೊರ ರಾಜ್ಯಗಳಿಗೆ ರವಾನೆ

ತೆಂಗು ಬೆಳೆಯಲ್ಲಿ ಕರ್ನಾಟಕ ದೇಶದಲ್ಲಿ ನಂ. 2 ಸ್ಥಾನದಲ್ಲಿದೆ

ಇದೀಗ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ಎಳನೀರು ಮಾರಾಟ ಮಾಡುತ್ತಿದೆ

ಬಿಸಿಲ ತಾಪಕ್ಕೆ ಜನರು ದೇಹ ತಂಪಾಗಿಸಿಕೊಳ್ಳಲು ಎಳನೀರಿನ ಮೊರೆ ಹೋಗಿದ್ದಾರೆ

ಬಿಸಿಲ ಧಗೆಗೆ ಬೆಂದಿರುವ ಉತ್ತರ ಭಾರತದ ಜನ ಕುಡಿಯಲು ಕರ್ನಾಟಕದ ಎಳನೀರೇ ಬೇಕು ಅಂತಿದ್ದಾರೆ

ಹಿಂದೆ ಕೇರಳ ಹಾಗೂ ತಮಿಳುನಾಡಿನಿಂದ ನಾನಾ ರಾಜ್ಯಗಳಿಗೆ ಅತಿ ಹೆಚ್ಚು ಎಳನೀರು ರಫ್ತಾಗುತ್ತಿತ್ತು

ಇದೀಗ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಉತ್ತರ ಭಾರತದ ರಾಜ್ಯಗಳಿಗೆ ಎಳನೀರು ರಫ್ತಾಗುತ್ತಿದೆ

ಪ್ರತಿನಿತ್ಯ 20 ಲಕ್ಷಕ್ಕೂ ಅಧಿಕ ಎಳನೀರು ರಾಜ್ಯದಿಂದ ರವಾನೆಯಾಗುತ್ತಿವೆ