ನೋಡುಗರ ಕಣ್ಮನ ಸೆಳೆಯುವ ಮಂಗಳೂರು ಕಂಬಳ

ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿರುವ ಈ ಮಂಗಳೂರು ಕಂಬಳ ವಿದೇಶಿಗರ ಕಣ್ಮನ ಸೆಳೆದಿದೆ

ಮಂಗಳೂರಿನ ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ 6ನೇ ವರ್ಷದ ರಾಮ- ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ಭಾನುವಾರ ಚಾಲನೆ ದೊರೆತಿದೆ

ಅಫ್ಘಾನಿಸ್ತಾನ, ಜರ್ಮನಿ ಮತ್ತು ಡೆನ್ಮಾರ್ಕ್‌ನಿಂದ ಮಂಗಳೂರಿಗೆ ಬಂದ ವಿದೇಶಿಗರು ಕಂಬಳ ವೀಕ್ಷಿಸಿದರು

ಇದೊಂದು ವಿಶಿಷ್ಟ ಕ್ರೀಡೆಯಾಗಿದ್ದು, ದಕ್ಷಿಣ ಕನ್ನಡದ ಸಂಸ್ಕೃತಿ ಸುಂದರವಾಗಿದೆ ಎಂದು ವಿದೇಶಿಗರು ಹೇಳಿದ್ದಾರೆ

2020ರಲ್ಲಿ ನಡೆದ ಕಂಬಳದ ಓಟದಲ್ಲಿ ಮೂಡುಬಿದಿರೆಯ ಮಿಜಾರ್‌ನ ಕಟ್ಟಡ ಕಾರ್ಮಿಕರಾದ ಶ್ರೀನಿವಾಸ್ ಗೌಡ ಅವರು 100 ಮೀ ದೂರವನ್ನು 9.55 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದರು

ಈ ಮೂಲಕ ಉಸೇನ್ ಬೋಲ್ಟ್ ದಾಖಲೆಯನ್ನು ಮುರಿದಿದ್ದರು. 2009ರಲ್ಲಿ ಉಸೇನ್ ಬೋಲ್ಟ್ ಅವರು 100 ಮೀಟರ್ ನ್ನು 9.58 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದರು

ಕೇವಲ ಹಳ್ಳಿ ಜನರನ್ನ ಆಕರ್ಷಿಸುತ್ತ್ತಿದ್ದ ಕಂಬಳ, ಪೇಟೆ ಮಂದಿಯನ್ನೂ ಖುಷಿಪಡಿಸಿದೆ. ವಿದೇಶಿಗರು ಕೂಡ ಸಕತ್ ಎಂಜಾಯ್ ಮಾಡಿದ್ದಾರೆ

ತುಳುನಾಡಿನ ಜಾನಪದ ಕ್ರೀಡೆ ಕಂಬಳ ಗ್ರಾಮೀಣ ಜನರನ್ನ ಹುಚ್ಚೆದ್ದು ಆಕರ್ಷಿಸುತ್ತಿತ್ತು

ಕಂಬಳಕ್ಕೂ ಹೈಟೆಕ್ ಟಚ್ ನೀಡಲಾಗಿದ್ದು ಸಿಟಿಯಲ್ಲೇ ಗ್ರಾಮೀಣ ಕ್ರೀಡೆಗೆ ಚಾಲನೆ ದೊರೆತಿದೆ. ಈ ಮೂಲಕ ನಗರದಲ್ಲಿ ಮತ್ತೆ ಕೊಣಗಳ ಗತ್ತು ಆರಂಭವಾಗಿದೆ