Karwaraದ ದಾಡ-ದೇವತಿ ದೇವರ ಜಾತ್ರೆ!
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ದಾಡ ಹಾಗೂ ದೇವತಿ ದೇವರ ಜಾತ್ರೆ
ಪ್ರತಿ ವರ್ಷ ಭರತ ಹುಣ್ಣಿಮೆಯ ಮರುದಿನ ನಡೆಯುವ ಈ ಜಾತ್ರೆಯನ್ನು ಇಲ್ಲಿನ ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ಮಾರ್ಕೇ ಪೂನವ್ ಎನ್ನಲಾಗುತ್ತೆ
ದೇವರ ಕುಲ ಭಕ್ತರು ತಮ್ಮ ಮದುವೆ ಮುಂಚೆ ಮಕ್ಕಳಿಗೆ ದೇವರ ಜಾತ್ರಾ ಸನ್ನಿದಿಗೆ ಕರೆದೊಯ್ದು ಹೊಟ್ಟೆಯ ಹೊಕ್ಕಳ ಹತ್ತಿರ ಸೂಜಿಯಿಂದ ದಾರವನ್ನು ಪೋಣಿಸಓದೇ ಈ ಜಾತ್ರೆಯ ವಿಶೇಷತೆ
ಈ ವಿಶೇಷ ಹರಕೆಗೆ ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ಸೆಲ್ ಅನ್ನಲಾಗುತ್ತೆ
ಸೂಜಿ ಪೋಣಿಸುವ ಹರಕೆ ಒಂದೆಡೆಯಾದ್ರೆ, ಇನ್ನೊಂದೆಡೆ ಮದುವೆಯಾದ ಮೊದಲ ವರ್ಷದಲ್ಲಿ ಮಹಿಳೆಯರು ಈ ದೇವರಿಗೆ ತಲೆ ಮೇಲೆ ದೀಪದ ಹಣತೆ ಇಟ್ಟು ಮೆರವಣಿಗೆ ನಡೆಸುತ್ತಾರೆ
ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ದೀವಜ್ ಎಂದು ಕರೆಯಲಾಗುತ್ತೆ
ಭಕ್ತ ಮಹಿಳೆಯರು ಕೂಡಾ ಪ್ರತಿ ವರ್ಷ ದೀವಜ್ ಹರಕೆ ನೀಡ್ತಾರೆ
ಒಟ್ಟಾರೆ ಗೋವಾ ಕರ್ನಾಟಕ ಗಡಿ ಗ್ರಾಮ ಮಾಜಾಳಿಯಲ್ಲಿ ಮಾರ್ಕೇ ಪೋನವ್ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಜಾತ್ರೆಗಿಂತ ವೈವಿಧ್ಯಮಯವಾಗಿ ನಡೆಯುತ್ತದೆ
ನೂರಾರು ವರ್ಷದ ಸಂಪ್ರದಾಯದ ಆಚರಣೆಗಳು ಚಾಚೂ ತಪ್ಪದೇ ನಡೆದದ್ದು ವಿಶೇಷವಾಗಿತ್ತು