ನೂತನ ಸ್ಪೀಕರ್​ ಆಗಿ ಆಯ್ಕೆಯಾದ UT Khader

ನೂತನ ಕಾಂಗ್ರೆಸ್ ಸರ್ಕಾರಕ್ಕೆ ಸ್ಪೀಕರ್ ಆಯ್ಕೆ ಗೊಂದಲ ಆಗಿತ್ತು

ಮಾಜಿ ಸಚಿವ ಯುಟಿ ಖಾದರ್​ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ

ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು

ಆದ್ರೆ ಸ್ಪೀಕರ್ ಆಗಿ ಮುಂದುವರಿಯಲು ಆರ್ ವಿ ದೇಶಪಾಂಡೆ ಹಿಂದೇಟು ಹಾಕಿದ್ದರು

ಹೈಕಮಾಂಡ್ ಸೂಚನೆ ಮೇರೆಗೆ ಸ್ಪೀಕರ್ ಆಗಲು ಯುಟಿ ಖಾದರ್ ಸಮ್ಮತಿಸಿದ್ದಾರೆ ಎನ್ನಲಾಗಿದೆ

2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಪ್ರತಿನಿಧಿ ಯು.ಟಿ. ಖಾದರ್

ಅಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ (2018-19) ಖಾದರ್ ಅವರು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು

ತಮ್ಮ ಸರಳ ವ್ಯಕ್ತಿತ್ವದಿಂದಾಗಿ ವಿರೋಧ ಪಕ್ಷದವರಿಂದಲೂ ಹೊಗಳಿಸಿಕೊಳ್ಳುವವರಲ್ಲಿ ರಾಜಕಾರಣಿ ಖಾದರ್ ಒಬ್ಬರು

ಮುಖ್ಯಮಂತ್ರಿ ಮತ್ತು ಸಚಿವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವಲ್ಲಿ ನಿಪುಣರಾಗಿದ್ದಾರೆ