ಬೆಂಗಳೂರಿನ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರದಲ್ಲಿ ಹೊಸ ಆದಿಯೋಗಿ ಪ್ರತಿಮೆಯನ್ನು ಇಶಾ ಫೌಂಡೇಶನ್ ಸ್ಥಾಪಿಸಿದೆ. 

ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಇದೆ ಈ ಆದಿಯೋಗಿ ಮೂರ್ತಿ. 

ಈ ಸ್ಥಳಕ್ಕೆ ಸದ್ಗುರು ಸನ್ನಿಧಿ (Sadghuru Sannidhi) ಎಂದೇ ಹೆಸರಿಸಲಾಗಿದೆ.

ಜನವರಿ 15ರಂದು ಈ ಆದಿಯೋಗಿ ಮೂರ್ತಿ ವಿದ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲಿದೆ.

ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಮೂರ್ತಿಯಷ್ಟೇ ಎತ್ತರವಿದೆ. 

ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ.

ವಿಶೇಷ ಲಿಂಗ ಭೈರವಿ ದೇವಿಯ ದರ್ಶನ ಮಾಡಬಹುದಾಗಿದೆ.

ಆದಿಯೋಗಿಯ ದರ್ಶನ ಪಡೆಯಲು ನೀವು ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ಪ್ರಯಾಣಿಸಿದರೆ ಸಾಕು!

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಸ್ಟ್ 45 ಕಿಲೋ ಮೀಟರ್, 

ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಲೋ ಮೀಟರ್ ಪಯಣಿಸಿದರೆ ನೀವು ಆದಿಯೋಗಿ ದರ್ಶನ ಮಾಡಬಹುದು.