Kalaburagi: ಶ್ರೀಕೃಷ್ಣನಿಗೆ 56 ಬಗೆ ನೈವೇದ್ಯ

ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರೇಶ್ವರ ಮಂದಿರದಲ್ಲಿ ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ ಅರ್ಪಣೆ

ಆರ್ಯವೈಶ್ಯ ಸಮಾಜದ ಮಹಿಳೆಯರಿಂದ ಪಂಚಾಕ್ಷರಿ ಬಾಗಿನ ಮತ್ತು ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ ಅರ್ಪಣೆ

ಅರಿಶಿಣ, ಸಕ್ಕರೆ, ಬೆಲ್ಲ, ಅಕ್ಕಿ, ವೀಳ್ಯದೆಲೆ, ಅಡಿಕೆ, ಬಳೆ, ಬ್ಲೌಸ್ ಪೀಸ್​, ಎಳ್ಳು-ಬೆಲ್ಲ ಸೇರಿ ವಿವಿಧ ದವಸ-ಧಾನ್ಯಗಳಿಗೆ ಪೂಜೆ

ಮಹಿಳೆಯರೆಲ್ಲಾ ಸೇರಿ ಕೈಯಲ್ಲಿ ಕಬ್ಬು ಹಿಡಿದು, ಹಾಡನ್ನು ಹಾಡಿ, ಭಕ್ತಿಯಿಂದ ನಮಿಸಿ ಪಂಚಾಕ್ಷರಿ ಬಾಗಿನ ಅರ್ಪಿಸಿದರು

ಗೌರಿಯನ್ನು ಹೂವಿನಿಂದ ಸಿಂಗರಿಸಿದ ತೊಟ್ಟಿಲಲ್ಲಿ ಕೂರಿಸಿ, ಪೂಜೆ ಸಲ್ಲಿಸಿ ತೊಟ್ಟಿಲ ಶಾಸ್ತ್ರ ನೆರವೇರಿಸಲಾಯಿತು

ಆಚರಣೆಯಲ್ಲಿ ಅತ್ಯಂತ ಗಮನಸೆಳೆದಿದ್ದು 56 ಬಗೆಯ ನೈವೇದ್ಯ ಅರ್ಪಣೆ

ಇಂತಹ ವಿಶಿಷ್ಟ ಸಂಭ್ರಮ, ಸಂಪ್ರದಾಯ ಕಂಡುಬಂದಿದ್ದು ಕಲಬುರಗಿಯ ನಗರೇಶ್ವರ ದೇವಸ್ಥಾನದಲ್ಲಿ

ಸಾಂಪ್ರದಾಯಿಕ ಸೀರೆಯುಟ್ಟು ವಿಶೇಷ ಸಂಪ್ರದಾಯವನ್ನು ನೆರವೇರಿಸಿದ ಮಹಿಳೆಯರು

ಶ್ರೀ ಕೃಷ್ಣನ ಭಕ್ತರ ಸಂಭ್ರಮವನ್ನು ಹೆಚ್ಚಿಸಿದ ಸಾಂಪ್ರದಾಯಿಕ ಆಚರಣೆ