ಚೆನ್ನಬಸವೇಶ್ವರ ಜಾತ್ರೆ

ಎಲ್ಲಿ ನೋಡಿದ್ರಲ್ಲಿ ಎತ್ತುಗಳ ಜಂಗುಳಿ

ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ಉಳವಿ ಗ್ರಾಮದ ಚೆನ್ನಬಸವೇಶ್ವರ ಜಾತ್ರೆಯ ಸಂಭ್ರಮವಿದು

ಅದೆಷ್ಟೋ ದೂರದಿಂದ ಆಗಮಿಸುವ ಚೆನ್ನಬಸವೇಶ್ವರ ಭಕ್ತರು ಇಂದಿಗೂ ಎತ್ತಿನ ಗಾಡಿಯನ್ನೇ ಅವಲಂಬಿಸಿದ್ದಾರೆ

ಬಯಲುಸೀಮೆಯ ಮಂದಿಯಂತೂ ಈ ಚಕ್ಕಡಿಗಾಡಿಯಲ್ಲಿ ಬರೋ ಫೋಸು ನೋಡಲೇಬೇಕು

ಈ ಜಾತ್ರೆಗೆ ಬರೋರಿಗೆ ಚಕ್ಕಡಿಗಾಡಿ ಅಂದ್ರೆ ಅದೇನೋ ಪ್ರತಿಷ್ಠೆ ಇದ್ದಂತೆ

ಈ ದೇಗುಲವು ಉತ್ತರ ಕನ್ನಡ ಹಾಗೂ ಬಯಲುಸೀಮೆಗೆ ಸಂಪರ್ಕ ಕೊಂಡಿಯಿದ್ದಂತೆ

300-400 ಕಿಲೋಮೀಟರ್ ದೂರದಿಂದ ಚಕ್ಕಡಿ ಮೂಲಕ ಬಂದು ಭಕ್ತರು ಅನ್ನ ದಾಸೋಹ ಮಾಡ್ತಾರೆ.

ನಂತರ ದೇವರ ಸೇವೆ ನೀಡಿ ನಾಲ್ಕು ದಿನಗಳಲ್ಲಿ ತಮ್ಮೂರನ್ನು ತಲುಪುತ್ತಾರೆ

ಎಲ್ಲಿ ನೋಡಿದ್ರೂ ಎತ್ತುಗಳ ಸಾಲು!

ಜಾತ್ರೆಯ ಮೊದಲು ಸ್ಥಳೀಯರು ಇವರಿಗೆ ನೀರು, ಪಾನಕ, ಮಜ್ಜಿಗೆ ಕೊಟ್ಟು ಸ್ವಾಗತಿಸುತ್ತಾರೆ.