ಉತ್ತರ ಕನ್ನಡದ ಶಿರಸಿಯ ಮಂಜುಗುಣಿಯಲ್ಲಿ ದೇವರನ್ನು ನೌಕಾ ವಿಹಾರಕ್ಕೆ ಕರೆದೊಯ್ಯುವ ಸಂಪ್ರದಾಯವಿದೆ.

ಕುದುರೆ ಸಾರೋಟು ಏರಿ ಬಂದ ದೇವರು.

ಶ್ರೀನಿವಾಸ ದೇವರ ನೌಕಾವಿಹಾರ!

ವರ್ಷದಲ್ಲಿ ಒಂದು ಬಾರಿ ಮಂಜುಗುಣಿಯ ಶ್ರೀನಿವಾಸ ದೇವರನ್ನು ನೌಕಾ ವಿಹಾರಕ್ಕೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ.

ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಊರ ಪರವೂರಿಂದಲೂ ಅಪಾರ ಭಕ್ತರು ಆಗಮಿಸುತ್ತಾರೆ.

ಜಯಘೋಷಗಳೊಂದಿಗೆ ಸಾಗಿ ಬರುವ ಮಂಜುಗುಣಿ ಶ್ರೀನಿವಾಸ ದೇವರು ಕುದುರೆ ಸಾರೋಟು ಏರಿ ಬಂದು ಅಲಂಕೃತಗೊಂಡ ನೌಕೆಯಲ್ಲಿ ವಿಹಾರ ನಡೆಸುತ್ತಾನೆ.

ಇಂತಹ ವಿಶೇಷ ಕ್ಷಣಕ್ಕೆ ಅಪಾರ ಭಕ್ತರು ಈ ಹಿಂದಿನಿಂದಲೂ ಸಾಕ್ಷಿಯಾಗುತ್ತಾ ಬಂದಿದ್ದಾರೆ.

ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಕಳೆಗುಂದಿದ್ದ ಉತ್ಸವವು ಈ ಬಾರಿ ಅದ್ಧೂರಿಯಾಗಿ ನಡೆಯಿತು.

Heading 3

ವಿದ್ಯುತ್ ದೀಪಗಳ ಬೆಳಕಿನಿಂದ ಅಲಂಕೃತಗೊಂಡ ದೋಣಿಯ ಮೂಲಕ ನೌಕಾ ವಿಹಾರವು ನಡೆಯಿತು.

ಬಳಿಕ ಶ್ರೀನಿವಾಸ ದೇವರನ್ನು ನೌಕಾ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ.