ಕಾರವಾರದಲ್ಲಿದೆ ಚಿಟ್ಟೆಗಳ ಪಾರ್ಕ್!

ಗೋಟೆಗಾಳಿ ಗ್ರಾಮದಲ್ಲಿ ಸಮೃದ್ಧ ಪರಿಸರವಿದೆ

ಇಲ್ಲಿ ಚಿಟ್ಟೆಗಳಿಗೆ ಸುರಕ್ಷಿತ ವಾಸಸ್ಥಳ ಕಲ್ಪಿಸಬೇಕು ಅಂತ ವರ್ಷದ ಹಿಂದೆ ಅರಣ್ಯ ಇಲಾಖೆ ಚಿಟ್ಟೆ ಪಾರ್ಕ್ ನಿರ್ಮಿಸಿದೆ

ಚಿಟ್ಟೆಗಳ ಪ್ರಮುಖ ಆಹಾರ ಸಸ್ಯಗಳಾದ ತೇರಿನ ಹೂವು, ಪೆಂಟಾಸ್, ಮಿಲ್ಕ್ ಪೀಡ್, ಗೊಂಡೆ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ

ಪ್ರಮುಖ ಚಿಟ್ಟೆ ಪ್ರಭೇದಗಳಾದ ಆ್ಯಂಗಲ್ಡ್ ಪೈರೋಟ್, ಗ್ರೇ ಕೌಂಟ್, ಪಿಕೋಕ್ ಫೆನ್ಸಿ, ಗ್ರೇ ಫೆನ್ಸಿ, ಟೈಗರ್​ನಂತಹ ಅನೇಕ ಚಿಟ್ಟೆಗಳು ಇಲ್ಲೇ ಮನೆ ಮಾಡ್ಕೊಂಡಿವೆ

ಇಲ್ಲಿಗೆ ಬರುವ ಪ್ರವಾಸಿಗರು ಈ ಬಣ್ಣ ಬಣ್ಣದ ಪತಂಗಗಳನ್ನ ಕಣ್ತುಂಬಿಕೊಂಡು ಖುಷಿಪಡ್ತಿದ್ದಾರೆ

ಕಾರವಾರ - ಬೆಳಗಾವಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಗೋಟೆಗಾಳಿ ಚಿಟ್ಟೆ ಪಾರ್ಕ್ ಇದೆ

ಇಲ್ಲಿ ವಾಕಿಂಗ್ ಮಾರ್ಗ, ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಇದೆ

ಇದರಿಂದ ಪಾರ್ಕ್​ಗೆ ಸ್ಥಳೀಯರು ಮಾತ್ರವಲ್ಲದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ

ಹೆದ್ದಾರಿ ಪಕ್ಕದಲ್ಲಿಯೇ ಪಾರ್ಕ್ ಇರುವ ಕಾರಣ ನೋಡುಗರಿಗೆ ಹೆಚ್ಚು ಅನುಕೂಲಕರವಾಗಿದೆ