ವಿಧವಿಧದ ದ್ರಾಕ್ಷಿಗಳನ್ನು ನೋಡಿ ರುಚಿ ಸವಿದು ಇಷ್ಟೊಂದು ವೆರೈಟಿ ಇವೆಯೇ ಎಂದು ಸಾರ್ವಜನಿಕರೇ ಅಚ್ಚರಿಪಟ್ರು ನೋಡಿ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ದ್ರಾಕ್ಷಿಗಳ ನಡುವೆ ಹೆಚ್ಚಿನ ವ್ಯತ್ಯಾಸ ಗುರುತಿಸೋದು ಕಷ್ಟ. ಆದ್ರೆ ದ್ರಾಕ್ಷಿ ಬೆಳೆಯಲ್ಲೂ ಹತ್ತಾರು ವೆರೈಟಿಗಳು ಇವೆ ಅನ್ನೋದನ್ನ ವಿಜಯಪುರದಲ್ಲಿ ನಡೆದ ದ್ರಾಕ್ಷಿ ಮಾರಾಟ ಮೇಳ ಸಾಬೀತುಪಡಿಸ್ತು.
ವಿಜಯಪುರ ದೇಶದಲ್ಲಿಯೇ ದ್ರಾಕ್ಷಿ ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ವಿಜಯಪುರ ದ್ರಾಕ್ಷಿಯ ಸಿಹಿ ಎಲ್ಲೆಡೆ ಪಸರಿಸಲಿ ಎಂಬ ಉದ್ದೇಶದಿಂದ ಈ ಮೇಳವನ್ನ ಆಯೋಜಿಸಲಾಗಿತ್ತು.
ಈ ಮೇಳಕ್ಕೆ ಆಗಮಿಸಿದ ಸಾರ್ವಜನಿಕರು ಕೂಡಾ ನೇರವಾಗಿ ರೈತರಿಂದ ಕಡಿಮೆ ಬೆಲೆಗೆ ದ್ರಾಕ್ಷಿಗಳನ್ನ ಖರೀದಿಸಿ ಕೊಂಡೊಯ್ದರು.
ಥಾಮ್ಸನ್ ಸೀಡಲೆಸ್, ಮಾಣಿಕ್ ಚಮನ್, ಕ ಸೋನಾಕಾ, ಎಸ್ಎಸ್ಎನ್, ಅನುಷ್ಕಾ, ಶರದ ಸೀಡ್ಲೆಸ್, ಕೃಷ್ಣಾ ಮತ್ತು ಜ್ಯೋತಿ ತಳಿಗಳ ದ್ರಾಕ್ಷಿಗಳ ಮಾಹಿತಿಯನ್ನ ಪಡೆಯುವ ಅವಕಾಶವೂ ಜನರಿಗೆ ಸಿಕ್ಕಿತು.
ಒಟ್ಟಿನಲ್ಲಿ ವಿಜಯಪುರದ ದ್ರಾಕ್ಷಿ ಸಿಹಿ ಊರಿಡೀ ಪಸರಿಸುವಂತಾಗಲು ದ್ರಾಕ್ಷಿ ಮೇಳ ಆಯೋಜಿಸಿದ್ದು ಉತ್ತಮ ಸ್ಪಂದನೆಯೂ ವ್ಯಕ್ತವಾಯಿತು.