Srirangapatnaದಲ್ಲಿದೆ ಬ್ರಿಟೀಷರ ಸಮಾಧಿಗಳು!

ಗಂಗರ ಕಾಲದಿಂದ ಹಿಡಿದು ಟಿಪ್ಪು ಸುಲ್ತಾನ್ ಕಾಲದವರೆಗಿನ ಸುಮಾರು 150-170 ಸಮಾಧಿಗಳು ಶ್ರೀರಂಗಪಟ್ಟಣದಲ್ಲಿವೆ

ಇವುಗಳಲ್ಲಿ ಕೆಲವು ಕೋಟೆ, ಕಂದಕ, ದೇವಾಲಯ, ಚರ್ಚ್, ಮಸೀದಿ ಸೇರಿಕೊಂಡು ಕಣ್ಮರೆಯಾಗಿವೆ

ಇಲ್ಲಿ ಸುಮಾರು 3 ಎಕರೆಯಲ್ಲಿ ಸಮಾಧಿಗಳ ಸಾಮ್ರಾಜ್ಯವೇ ರೂಪುಗೊಂಡಿವೆ

3 ಎಕರೆ ವಿಸ್ತೀರ್ಣದಲ್ಲಿರುವ ಸೆಮಂಟರಿಯಲ್ಲಿ 500ಕ್ಕೂ ಅಧಿಕ ಬ್ರಿಟೀಷರ ಸಮಾಧಿಗಳಿವೆ

ಮಾಹಿತಿ ಕೊರತೆಯಿಂದ ಪ್ರದೇಶಕ್ಕೆ ಪ್ರವಾಸಿಗರು ಯಾರೂ ಹೋಗುತ್ತಿಲ್ಲ

ಮಡಿದ ಬ್ರಿಟೀಷ್ ಅಧಿಕಾರಿಗಳ ಶವ ಹೂಳಲು ಒಂದು ಸ್ಥಳ ಆರಿಸಿಕೊಂಡು ಬ್ರಿಟೀಷರಿಗೆ ಮಾತ್ರ ಮೀಸಲಾಗಿಡಲಾಗಿತ್ತು

ಗಣ್ಯರು, ಸೈನಿಕರು ಮೃತಪಟ್ಟಾಗ ಮಾತ್ರ ಅಲ್ಲಿ ಹೂತು ಜಾಗದಲ್ಲಿ ಸಮಾಧಿ ಮಾಡಲಾಗ್ತಿತ್ತು

ಬ್ರಿಟೀಷರ 500ಕ್ಕೂ ಹೆಚ್ಚು ಸಮಾಧಿಗಳನ್ನು ಆಕರ್ಷಕವಾಗಿ ಕಟ್ಟಿ ಗ್ಯಾರೀಸನ್ ಸೆಮಂಟರಿ ಎಂದು ಹೆಸರಿಡಲಾಗಿದೆ

ಯುರೋಪ್ ಸೇನಾಟೋಪ್ ಶೈಲಿಯಲ್ಲಿ ಸಮಾಧಿಗಳನ್ನು ನಿರ್ಮಾಣ ಮಾಡಲಾಗಿದೆ

ಸಮಾಧಿಯನ್ನು ಚುರುಕಿಗಾರೆ, ಸುಟ್ಟ ಇಟ್ಟಿಗೆ ಬಳಸಿ ನಿರ್ಮಿಸಲಾಗಿದೆ

ಸಮಾಧಿಯ ಮೇಲೆ ಅಮೃತ ಶಿಲೆಯಲ್ಲಿ ಬೈಬಲ್ ಸಂದೇಶ, ಹೆಸರು, ಹುದ್ದೆ, ಜೀವಿತಾವಧಿಯನ್ನು ಕೆತ್ತಲಾಗಿದೆ