ಪುತ್ತೂರಿನಲ್ಲಿ ಭಾರತ ಮಾತೆಯ ಮಂದಿರ! ಹೆಚ್ಚಲಿದೆ ಇನ್ನಷ್ಟು ದೇಶಪ್ರೇಮ
ಸುಮಾರು 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಮಂದಿರವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ ಈ ವಿಶೇಷ ದೇವಸ್ಥಾನ.
ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಉದ್ಧೇಶವೇ ಈ ಮಂದಿರದ ಹಿಂದಿದೆ.
ದಕ್ಷಿಣ ಭಾರತದ 2ನೇ ಭಾರತ ಮಾತೆಯ ಮಂದಿರ ಈಶ್ವರಮಂಗಲದ ಅಮರಗಿರಿಯಲ್ಲಿ ನಿರ್ಮಾಣವಾಗಿದೆ.
ಉದ್ಯಾನವನದ ಮಧ್ಯದಲ್ಲಿರುವ ಸೈನಿಕನ ಶಿಲಾ ಹಸ್ತದಲ್ಲಿ ಭಾರತದ ಧ್ವಜವನ್ನು ಅಳವಡಿಸಲಾಗುತ್ತದೆ.
ಭಾರತ ಮಾತೆಯ ಮಂದಿರದ ಪ್ರವೇಶ ದ್ವಾರದಲ್ಲಿ ವಂದೇ ಮಾತರಂ ಹಾಡಿನ ಸಾಲುಗಳನ್ನು ಬರೆಯಲಾಗಿದೆ.
ಶಾಲಾ ಮಕ್ಕಳಿಗಾಗಿ ಮಂದಿರವನ್ನು ತೆರೆದು ರಾಷ್ಟ್ರಪ್ರೇಮದ ಜಾಗೃತಿಯನ್ನು ಮಾಡಲು ತೀರ್ಮಾನಿಸಲಾಗಿದೆ
ಮಂದಿರದ ಒಳಗೆ ಭಾರತ ಮಾತೆಯ ಅಮೃತ ಶಿಲೆಯ ಪ್ರತಿಮೆ ಸ್ಥಾಪಿಸಲಾಗಿದೆ.
ಮಂದಿರದ ಇನ್ನೊಂದು ಪಾರ್ಶ್ವದಲ್ಲಿ ಸೈನಿಕರ ಸ್ಮಾರಕವನ್ನೂ ಸ್ಥಾಪಿಸಲಾಗಿದೆ.