ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ಟೋಲ್ ಶುರು!

ಈ ಹೆದ್ದಾರಿಯ ಟೋಲ್ ದರ ಕನಿಷ್ಠ ₹135

ಜೊತೆಗೆ ಸ್ಥಳೀಯ ವಾಹನಗಳಿಗೆ ₹70 ನಿಗದಿಪಡಿಸಲಾಗಿದೆ.

ನೀವು ಈ ಹೆದ್ಧಾರಿಯಲ್ಲಿ ಖಾಯಂ ಪ್ರಯಾಣ ಮಾಡುವವರು ಎಂದರೆ ನಿಮಗೆ ತಿಂಗಳ ಪಾಸ್ ಸೌಲಭ್ಯವೂ ಸಿಗುತ್ತದೆ.

ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ಒಟ್ಟು 10 ಪಥಗಳ ಹೆದ್ದಾರಿ.

₹4,425ರಿಂದ ಆರಂಭವಾಗಿ ₹29,255 ವರೆಗೆ ಹಲವು ಬಗೆಯ ತಿಂಗಳ ಪಾಸ್​ಗಳು ನಿಮಗೆ ದೊರೆಯುತ್ತವೆ.

ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ ಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ನಿರ್ಮಿಸಲಾಗಿದೆ. 

ಮಾಸಿಕ ಪಾಸ್​ಗೆ ರೂ 4,525 ಆಗಿದ್ದು, ಒಂದು ತಿಂಗಳಲ್ಲಿ 50 ಬಾರಿ ಒಂದು ಬದಿ ಪ್ರಯಾಣ ಮಾಡಬಹುದಾಗಿದೆ.

ಬಸ್ ಅಥವಾ ಟ್ರಕ್​ಗಳ ಒಂದು ಬದಿ ಪ್ರಯಾಣಕ್ಕೆ 460 ರೂ. ಪಾವತಿಸಬೇಕು.

ನೀವು ಕಾರು, ಜೀಪು ಅಥವಾ ವ್ಯಾನ್ ಹೊಂದಿದ್ದರೆ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕು.