ಬೇಡರ ವೇಷದಲ್ಲಿ ಬೇಡರ ಕಥೆ

ಸೋಂದಾದ ದಂಡನಾಯಕ ದಾಸಪ್ಪ ನಾಯಕನ ಮಗಳು ರುದ್ರಾಂಬಿಕೆಯನ್ನು ಆ ಕಾಲದ ವೀರನಾದ ಮಲ್ಲೇಶಿ ಮದುವೆಯಾಗಲೂ ಬಯಸುತ್ತಾನೆ.

ಮಲ್ಲೇಶಿ ವೀರನೇನೋ ಸರಿ ಆದರೆ ಅವನ ಏಕಸ್ವಾಮ್ಯ ನಂತರ ಆತನ ಪುಢಾರಿತನ ಮಿತಿ ಮೀರಿ ಹೋಗಿತ್ತು.

ಹೀಗಾಗಿ ಊರಿನ ಹಿತ ಬಯಸಿ ಮದುವೆಯಾಗುವ ರುದ್ರಾಂಬಿಕೆ, ವಸಂತ ಪಂಚಮಿಯ ಹೋಳಿ ಸಮಯದಲ್ಲಿ 

ಮಲ್ಲೇಶಿ ಕಣ್ಣಿಗೆ ಖಾರವನ್ನೆರಚಿ ಊರ ತುಂಬಾ ಅಲೆದಾಡಿಸಿ ನಂತರ ಸುಟ್ಟುಹಾಕುತ್ತಾಳೆ.

ಅದರ ಪ್ರತೀಕವಾಗಿ ಮಲ್ಲೇಶಿಗೆ ಇನ್ನೂ ಕಣ್ಣು ಕಾಣಿಸುತ್ತಿಲ್ಲ ಎಂಬ ನಂಬಿಕೆ ಇದೆ.

ಮುಂದೆ ಒಬ್ಬ, ಹಿಂದೆ ಇಬ್ಭರು ಅವನ ಚಲನೆಯನ್ನು ನಿಯಂತ್ರಿಸುತ್ತಾರೆ.

ಒಟ್ಟಿನಲ್ಲಿ ಬೇಡರ ವೇಷ ಅದೆಂತಹದ್ದೇ ಉತ್ಸವಕ್ಕೂ ಮೆರುಗು ನೀಡಬಲ್ಲದು.

ಅದರ ಕುಣಿವಂತೂ ಹುಚ್ಚೆಬ್ಬಿಸಿ ಕುಣಿಸಬಲ್ಲದು.

ಮಾತ್ರವಲ್ಲದೇ ಇಡೀ ಸಭೆಯ ಗಮನವನ್ನ ಸೆಳೆಯಬಲ್ಲ ವಿಶಿಷ್ಟ ಕಲೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.