ಈ ಯಂತ್ರದಿಂದ ಸಲೀಸಾಗಿ ಎಲ್ಲಾ ಮರ ಏರಬಹುದು!

ಯಂತ್ರದ ಮೇಲೆ ಕೂತು ಸಲೀಸನೇ ಮರ ಏರುತ್ತಿರುವ ಈ ಕೃಷಿಕನನ್ನೊಮ್ಮೆ ನೋಡಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಮಲೆ ಗಣಪತಿ ಭಟ್ ಆವಿಷ್ಕರಿಸಿದ ಈ ಯಂತ್ರಕ್ಕೆ ಈಗ ದಕ್ಷಿಣ ಭಾರತದಾದ್ಯಂತ ಬೇಡಿಕೆ ಬಂದಿದೆ

ಅಂಕು-ಡೊಂಕು ಮರವಿದ್ದರೂ ಯಾವುದೇ ಅಡೆತಡೆಯಿಲ್ಲದೇ ಮರದ ತುದಿ ತಲುಪುತ್ತೆ ಈ ಯಂತ್ರ

ತೆಂಗು, ಅಡಿಕೆ, ಸಿಲ್ವರ್ ಮರ, ಮಾವಿನ ಮರ, ಹಲಸಿನ ಮರ ಸೇರಿದಂತೆ ಎಲ್ಲಾ ಮರಗಳನ್ನು ಈ ಟ್ರೀ ಬೈಕ್ ಬಳಸಿ ಏರಬಹುದಾಗಿದೆ

ಒಂದು ಲೀಟರ್ ಪೆಟ್ರೋಲ್ ಗೆ 80 ಮರಗಳನ್ನು ಈ ಯಂತ್ರದಿಂದ ಏರಬಹುದಾಗಿದೆ

45 ಕೆಜಿ ಭಾರವಿರುವ ಟ್ರೀ ಬೈಕ್​ನ್ನು ಟ್ರಾಲಿ ಮೂಲಕ ಆರಾಮಾಗಿ ಒಯ್ಯಬಹುದಾಗಿದೆ

ಈ ಟ್ರೀ ಬೈಕ್​ಗೆ ಈಗ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬಂದಿದೆ

ಐದರಿಂದ ಹದಿನೈದು ಇಂಚು ದಪ್ಪದ ಮರವನ್ನು ಏರಬಹುದಾಗಿದ್ದು ಸದ್ಯ ಈ ಯಂತ್ರಕ್ಕೆ ಕರ್ನಾಟಕ ಮಾರುಕಟ್ಟೆಯಲ್ಲಿ ಒಂದು ಲಕ್ಷದ ಐವತ್ತೈದು ಸಾವಿರ ರೂಪಾಯಿ ದರವಿದೆ

ರ್ನಾಟಕ ಸರ್ಕಾರದ ಈ ಯಂತ್ರ ಖರೀದಿಸುವ ರೈತರಿಗೆ 43 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದೆ