ಇದು ಬಾಣಂತಿ ದೇಗುಲ!
ಬಾಣಂತಿಯರೇ ಇಲ್ಲಿ ಭಕ್ತರು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಲ್ಲಿದೆ ಈ ದೇಗುಲ
ಇದೇನಪ್ಪ ಬಾಣಂತಿಯೂ ದೇವರಾದ್ರಾ ಅನ್ಕೊಂಡ್ರಾ? ಅಲ್ಲೇ ಇದೇ ವಿಶೇಷ.
ಜನಸಾಮಾನ್ಯ ಮಹಿಳೆಯೇ ದೇವಿಯಾದ ಅದ್ಭುತ ಕಥೆಯಿದು!
ಮಕ್ಕಳಾಗದವರು ಇಲ್ಲಿ ಹರಕೆ ಹೊತ್ತು ಮಕ್ಕಳನ್ನು ಪಡೆಯುತ್ತಾರೆ
ಮಗುವಿಗೆ ಆರಾಮಾದ್ರೆ
ನಿನ್ನ ಸಾನಿಧ್ಯದಲ್ಲಿ ಮಕ್ಕಳನ್ನು ಬಾಳೆ ಎಲೆಯಲ್ಲಿ ತೇಲಿ ಬಿಡುತ್ತೇವೆ ಎಂದು ಬೇಡಿಕೊಳ್ತಾರೆ
ಕೆರೆಯ ಕಟ್ಟೆಗಳು ಈ ಹರಕೆಗಳಿಂದ ಮಕ್ಕಳಿಂದ ತುಂಬಿ ಹೋಗುತ್ತೆ.
ಸುಮಾರು 200 ವರ್ಷಗಳ ಇತಿಹಾಸ ಈ ದೇಗುಲಕ್ಕಿದೆ
ಊರಿನ ಹಿರಿಯರು ಬಾಣಂತಿ ದೇವಿಯ ತೆಪ್ಪ ಹಿಡಿದು ಮಕ್ಕಳನ್ನು ಬಾಳೆಲೆಯಲ್ಲಿ ತೇಲಿಸುತ್ತಾರೆ.
ಈ ಬಾಣಂತಿ ದೇವಿಯನ್ನು ನೀವೂ ಒಮ್ಮೆ ದರ್ಶನ ಮಾಡಿ.