ಇದು ದಕ್ಷಿಣ ಭಾರತದ ಅಯೋಧ್ಯೆಯೆಂದೇ ಫೇಮಸ್!

ಈ ಪವಿತ್ರ ಕ್ಷೇತ್ರವೇ ಈಗ ಇಡೀ ರಾಜ್ಯದ ಕೇಂದ್ರಬಿಂದು!

ಸುತ್ತ ಹಸಿರು ಕಾಡು, ಎತ್ತರದ ಬೆಟ್ಟದಲ್ಲಿ ಪವಡಿಸಿದ್ದಾನೆ ಶ್ರೀ ರಾಮಚಂದ್ರ! 

ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ! ಈ ಹೆಸರು ಈಗ ರಾಜ್ಯದೆಲ್ಲೆಡೆ ಚಿರಪರಿಚಿತ.

ರಾಮ ದೇವರ ಬೆಟ್ಟದಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. 

ಇನ್ನು ದೇಗುಲದ ಸುತ್ತಲಿನ ಒಟ್ಟು 19 ಎಕರೆ ಪ್ರದೇಶ ಮುಜರಾಯಿ ಇಲಾಖೆಗೆ ಸೇರಲಿದೆ.

ರಾಮನಗರದ ರಾಮದೇವರ ಬೆಟ್ಟ ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ.

ರಾಮನಗರದಿಂದ ಕೇವಲ 3 ಕಿ.ಮೀ ಮುಂದೆ ಹೋದರೆ ನಿಮಗೆ ಈ ಸುಂದರ ಪವಿತ್ರ ತಾಣ ಸಿಗುತ್ತೆ.

ರಾಮದೇವರ ಬೆಟ್ಟವನ್ನ ಇಕೋ ಸೆನ್ಸಿಟಿವ್ ಝೋನ್ ಎಂದು ಗುರುತಿಸಲಾಗಿದೆ.

ಮುಂದೆ ಅಭಿವೃದ್ಧಿ ಪಡಿಸಲು ಮುಂದಾದರೆ ಸಂಬಂಧಿಸಿದ ಸೆಂಟ್ರಲ್ ಹಾಗೂ ಸ್ಟೇಟ್ ಬೋರ್ಡ್ನಿಂದ ಅನುಮತಿ ಪಡೆಯಬೇಕಿದೆ ಎನ್ನುತ್ತದೆ ಅರಣ್ಯ ಇಲಾಖೆ.