Ankolaದ ಮಡಿಕೆಗೆ ಗೋವಾದಲ್ಲಿ ಡಿಮ್ಯಾಂಡ್!
ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುವ ಫೀಸ್ಟ್ಗೆ ನಮ್ಮ ಅಂಕೋಲಾದಲ್ಲಿ ತಯಾರಾಗೋ ಮಣ್ಣಿನ ಮಡಿಕೆಗೆ ಎಲ್ಲಿಲ್ಲದ ಬೇಡಿಕೆಯಿದೆ
ಕುಂಬಾರಕೇರಿ ಗ್ರಾಮದಲ್ಲಿ ಕುಂಬಾರಿಕೆ ಮಾಡುವವರು ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಜನವರಿ ಕೊನೆಯ ವಾರ ಇಲ್ಲವೇ ಫೆಬ್ರವರಿ ಮೊದಲ ವಾರದಲ್ಲಿ ತಯಾರಿಸುತ್ತಾರೆ
ಗೋವಾದಲ್ಲಿ ನಡೆಯುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಫೀಸ್ಟ್ಗೆ ಮಣ್ಣಿನ ಮಡಿಕೆ ಮತ್ತು ಉರುವಲು ಒಲೆಗಳನ್ನು ತಯಾರಿಸುತ್ತಾ ಬಂದಿದ್ದಾರೆ
ನಂತರ ಇವುಗಳನ್ನ ಗೋವಾಕ್ಕೆ ಕಳುಹಿಸಿಕೊಡಲಾಗುತ್ತದೆ
ಅಂಕೋಲಾದಲ್ಲಿ ತಯಾರಾದ ಮಣ್ಣಿನ ಮಡಿಕೆಗಳು ಹೆಚ್ಚಿನ ಬಾಳಿಕೆ ಬರುತ್ತವೆ ಅನ್ನೋ ಕಾರಣಕ್ಕೆ ಗೋವಾ ಫೀಸ್ಟ್ ನಲ್ಲಿ ಹೆಚ್ಚಿನ ಡಿಮ್ಯಾಂಡ್ ಕುದುರಿಸಿಕೊಳ್ಳುತ್ತವೆ
ವಿಶೇಷ ಅಂದ್ರೆ ಈ ಹಬ್ಬದ ನೆನಪಿಗೆ ಜನರು ತಮ್ಮ ಇಷ್ಟಾರ್ಥರಿಗೆ, ಅತಿಥಿಗಳಿಗೆ ಹೀಗೆ ಪರಸ್ಪರ ಕಾಣಿಕೆಯಾಗಿ ಈ ಮಣ್ಣಿನ ಮಡಿಕೆ, ಒಲೆ ನೀಡುವ ಸಂಪ್ರದಾಯವಿದೆ
ಅಂಕೋಲಾದಿಂದ ಕಳೆದ ಹತ್ತು ವರ್ಷಗಳ ಹಿಂದೆ ಮೂರರಿಂದ ನಾಲ್ಕು ವಾಹನದಲ್ಲಿ ಮಡಿಕೆ ಮತ್ತು ಒಲೆಗಳನ್ನು ಹೇರಿಕೊಂಡು ಹೋಗುತ್ತಿದ್ದರು
ಆದರೆ ಇತ್ತೀಚಿನ ದಿನದಲ್ಲಿ 500 ಮಡಿಕೆ ಮತ್ತು 300 ಒಲೆಗಳನ್ನು ಒಂದು ಕುಟುಂಬ ಖರೀದಿಸಿಕೊಂಡು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದಾರೆ
ಗೋವಾದಲ್ಲಿ 7 ದಿನ ನಡೆಯುವ ಈ ಫೀಸ್ಟ್ ಸಂದರ್ಭದಲ್ಲಿ ಅಂಕೋಲಾದ ಮಣ್ಣಿನ ಮಡಿಕೆ, ಒಲೆಗಳು ಕೂಡಾ ಹೆಚ್ಚಿನ ಗಮನ ಸೆಳೆಯುತ್ತದೆ