ಇಲ್ಲಿದೆ ಆನೆಗಳ School
ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ಪಕ್ಕದಲ್ಲೇ ಇದೆ ಈ ಆನೆಕೊಂಡ
ಹೆಸರೇ ಹೇಳುವಂತೆ ಇಲ್ಲಿ ಎಲ್ಲಿ ನೋಡಿದರೂ ಆನೆಗಳದ್ದೇ ಕಾರುಬಾರು
ಕೇರಳ ದೇವಸ್ವಂ ಬೋರ್ಡ್ ಆಡಳಿತಕ್ಕೊಳಪಟ್ಟ ಈ ಕೇಂದ್ರದಲ್ಲಿ ಆನೆಗಳಿಗೆ ಪಾಠ ಹೇಳಿಕೊಡಲಾಗುತ್ತೆ
ಒಂದೆರಡಲ್ಲ, ಒಟ್ಟು 45 ಆನೆಗಳು ಇಲ್ಲಿ ಕ್ಲಾಸ್ಗೆ ಕೂರುತ್ವೆ. ಚಿಕ್ಕ ಮಕ್ಕಳಿಗೆ ಪಾಠ ಹೇಳಿದಂತೆ ಆನೆಗಳಿಗೂ ಇಲ್ಲಿ ಪಾಠ ಹೇಳ್ಕೊಡಲಾಗುತ್ತೆ
ಕೇರಳದ ಪ್ರತಿಷ್ಠಿತ ಮನೆತನಗಳು ಆನೆಗಳನ್ನು ಸಾಕೋದು ಸಾಮಾನ್ಯ
ಈ ಭಾಗದ ಎಲ್ಲಾ ಪ್ರತಿಷ್ಠಿತ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಆನೆಗಳನ್ನು ಸಾಕಲಾಗುತ್ತೆ
ತಾವು ಸಾಕಿದ ಈ ಆನೆಗಳನ್ನು ತಮ್ಮ ಗ್ರಾಮದಲ್ಲಿ, ವಿವಿಧ ಧಾರ್ಮಿಕ ಕ್ಷೇತ್ರಗಳ ಉತ್ಸವಕ್ಕೆ ನೀಡುತ್ತಿರುವ ಸಂಪ್ರದಾಯವಿದೆ
ಒಮ್ಮೆ ಆನೆಗಳು ಈ ತರಬೇತಿ ಕೇಂದ್ರ ಸೇರಿದ್ರೆ ಸಾಕು, ಅವುಗಳ ಲಾಲನೆ, ಪಾಲನೆ ಎಲ್ಲ ಇಲ್ಲೇ ನಡೆಯುತ್ತೆ
ಕೇರಳ ಪ್ರವಾಸಕ್ಕೇನಾದ್ರೂ ಹೋದ್ರೆ ಆನೆಗೊಂಡಕ್ಕೆ ಭೇಟಿ ಕೊಡೋದನ್ನ ಮರೆಯಬೇಡಿ