Panipuri ಮಾಡೋ ಯಂತ್ರ ನೋಡಿದ್ದೀರಾ

ಅಹಮದಾಬಾದ್ ಇಂಜಿನಿಯರ್ ಒಬ್ಬರು ಪಾನಿಪುರಿ ಮಾಡೋ ಯಂತ್ರವನ್ನು ತಯಾರಿಸಿದ್ದಾರೆ

ಯಂತ್ರದ ಮೂಲಕ ಒಂದು ಗಂಟೆಯಲ್ಲಿ 40,000 ಪೂರಿಗಳನ್ನು ತಯಾರಿಸಬಹುದಾಗಿದೆ

ಕೈ-ಕಾಲುಗಳಿಂದ ಹಿಟ್ಟನ್ನು ಬೆರೆಸಿ ಪಾನಿಪುರಿಯನ್ನು ಹೇಗೆ ತಯಾರಿಸುತ್ತಾರೆ ಎಂಬ ವೈರಲ್ ವಿಡಿಯೋ ಆಕಾಶ್ ನೋಡಿದ್ದರು 

ಆಕಾಶ್ ಗಜ್ಜರ್ ಸ್ವಚ್ಛವಾಗಿ ಪಾನಿಪುರಿ ತಯಾರಿಸುವ ಯಂತ್ರವನ್ನು ತಯಾರಿಸಲು ಆಲೋಚಿಸಿದರು 

ವೈರಲ್ ವಿಡಿಯೋ ನೋಡಿದಾಗಲೇ ಆಕಾಶ್ ಗಜ್ಜರ್ ಪಾನಿಪುರಿ ಯಂತ್ರವನ್ನು ತಯಾರಿಸಲು ನಿರ್ಧರಿಸಿದರು

ಯಂತ್ರದಲ್ಲಿ ಪಾನಿಪುರಿ ಮಾಡೋದು ಹೇಗೆ? ಇಲ್ಲಿದೆ ನೋಡಿ ಮಾಹಿತಿ

ಮೊದಲಿಗೆ ಹಿಟ್ಟು ಮತ್ತು ನೀರನ್ನು ಮಿಶ್ರಣ ಯಂತ್ರದಲ್ಲಿ ಹಾಕಲಾಗುತ್ತದೆ

ಹಿಟ್ಟು ಮಿಶ್ರಣಗೊಂಡ ಬಳಿಕ ಹಿಟ್ಟಿನ ಹಾಳೆಯು ರೂಪುಗೊಳ್ಳುತ್ತದೆ

ಬಳಿಕ ಹಿಟ್ಟಿನ ಹಾಳೆಯನ್ನು ಕತ್ತರಿಸುವ ಯಂತ್ರಕ್ಕೆ ವರ್ಗಾಯಿಸಲಾಗುತ್ತದೆ

ಕತ್ತರಿಸುವ ಯಂತ್ರದಲ್ಲಿ ಹಿಟ್ಟಿನ ಹಾಳೆಯು ಪಾನಿಪುರಿಯ ಆಕಾರವನ್ನು ಪಡೆಯುತ್ತದೆ

ಕೊನೆಯದಾಗಿ ಯಂತ್ರದಲ್ಲಿಯೇ ಎಣ್ಣೆಯಲ್ಲಿ ಪೂರಿ ಕರಿಯಲಾಗುತ್ತದೆ