Kumtaದಲ್ಲಿ ನಡೆಯಿತು ಅಘನಾಶಿನಿ ಆರತಿ!

ವಾರಣಾಸಿಯಲ್ಲಿ ಗಂಗಾರತಿ ನಡೆಯುತ್ತೋ ಅದೇ ರೀತಿಯ ಸಂಭ್ರಮ ಅಘನಾಶಿನಿ ದಡದಲ್ಲೂ ಕಳೆಗಟ್ಟಿತ್ತು

ಅತ್ತ ನದಿಯು ಶಾಂತವಾಗಿ ಹರಿಯುತ್ತಿದ್ರೆ, ಇತ್ತ ದಡದಲ್ಲಿ ನಿಂತು ಯುವಕ, ಯುವತಿಯರು ಶ್ವೇತವಸ್ತ್ರ ಧರಿಸಿ ಅಘನಾಶಿನಿಗೆ ಆರತಿ ಎತ್ತಿ ಕೃತಜ್ಞತೆ ಸಲ್ಲಿಸಿದರು

ನೆರೆದ ನೂರಾರು ಜನರು ಈ ಕ್ಷಣವನ್ನ ಕುತೂಹಲದಿಂದ ಕಣ್ತುಂಬಿಕೊಂಡರು

ಕರಾವಳಿಯಲ್ಲಿ ನಡೆಯುವ ಈ ಆರತಿಯು ಗಂಗೆಗೆ ನಡೆಯುವ ಆರತಿಯಂತೆ ಜನ ಖುಷಿಪಟ್ಟರು

ಶಿರಸಿಯ ಶಂಕರಹೊಂಡದಲ್ಲಿ ಜನಿಸಿ ಕುಮಟಾ ಮಾರ್ಗವಾಗಿ ಕಡಲು ಸೇರುವ ಅಘನಾಶಿನಿ ಇದರ ಮಧ್ಯೆ ಜಲಪಾತವಾಗಿ, ಅಬ್ಬಿನೀರಾಗಿ, ಪಾವನತೀರ್ಥವಾಗಿ ಹರಿಯುತ್ತಾಳೆ

ಅಷ್ಟೇ ಅಲ್ಲ ಶಿರಸಿಯ ಮಂಜುಗುಣಿಯಲ್ಲಿ ಪಾಪನಾಶಿನಿಯಾಗಿಯೂ ಹರಿಯುತ್ತಾಳೆ

ನದಿಯ ನಾಲ್ಕೂ ದಿಕ್ಕಿನಲ್ಲಿ ದೀಪಾಲಂಕಾರ ಮಾಡಿ ಬಿಳಿ ಬಟ್ಟೆ ಉಟ್ಟುಕೊಂಡು ಹೂವನ್ನು ಸಮರ್ಪಿಸಿ ನಂತರ ಸಾವಿರಾರು ಜನರ ನಡುವೆ ಸುಮಾರು ಏಳು ನಿಮಿಷದ ಕಾಲ ಆರತಿ ಮಾಡಲಾಯಿತು

ಒಟ್ಟಿನಲ್ಲಿ ಅಘನಾಶಿನಿ ನದಿ ದಡ ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು

ಕರಾವಳಿಯಲ್ಲಂತೂ ಇಂತಹ ಹೊಸ ಪದ್ಧತಿ ಗಮನಸೆಳೆಯಿತು