ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಇನ್ನುಮುಂದೆ ನೂತನ ರಥವೇರಿ ಬರಲಿದ್ದಾಳೆ ಮೂಕಾಂಬಿಕೆ ದೇವಿ.
ತ್ರಿಡಿ ತಂತ್ರಜ್ಞಾನದ ಮೂಲಕ ನಿರ್ಮಾಣಗೊಂಡ ನೂತನ ರಥವನ್ನ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕೊಲ್ಲೂರು ಕ್ಷೇತ್ರಕ್ಕೆ ತಂದು ಸಮರ್ಪಿಸಲಾಗಿದೆ.
ಕೆಳದಿ ಅರಸರು ಕೊಟ್ಟ ರಥ ಈಗಾಗಲೇ 400 ವರ್ಷ ಹಳೆಯದ್ದಾದರಿಂದ ಹಳೆ ರಥದ ರೂಪದಲ್ಲೇ ಹೊಸ ರಥವನ್ನ ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಹೊಸ ರಥ ನಿರ್ಮಿಸಲಾಗಿದೆ.
ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ. ಆರ್.ಎನ್. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್ ಶೆಟ್ಟಿ ಒಂದು ಕೋಟಿ ವೆಚ್ಚದಲ್ಲಿ ರಥ ನಿರ್ಮಿಸಲು ಮುಂದಾದವರು
ಕೋಟೇಶ್ವರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಮೂಲಕ ರಥ ನಿರ್ಮಾಣ ಮಾಡಿಸಿ ದೇಗುಲಕ್ಕೆ ಸಮರ್ಪಿಸಲಾಗಿದೆ.
ಒಂಬತ್ತು ತಿಂಗಳ ಕಾಲ ಕುಂಭಾಷಿಯಲ್ಲಿ ನಿರ್ಮಾಣಗೊಂಡ ರಥವನ್ನ ಮೆರವಣಿಗೆ ಮೂಲಕ ಕೊಲ್ಲೂರು ಕ್ಷೇತ್ರಕ್ಕೆ ಸಮರ್ಪಿಸಲಾಗುತ್ತಿದೆ.
ಈ ರಥವನ್ನು ಧಾರ್ಮಿಕ ಪೂಜಾ ವಿಧಿವಿಧಾನದ ಮೂಲಕ ಹಳೆ ರಥದ ದೈವಿಕ ಶಕ್ತಿ ಇರುವ ಕಳೆ ಹೊಸ ರಥಕ್ಕೆ ವರ್ಗಾಯಿಸಲಾಗಿದೆ.
ಮಾರ್ಚ್ ತಿಂಗಳಲ್ಲಿ ಅದ್ದೂರಿ ರಥೋತ್ಸವ ನಡೆಯಲಿದೆ. ಈ ರಥೋತ್ಸವದಲ್ಲಿ ಹೊಸ ರಥವೇರಿ ಬರುವ ಮೂಕಾಂಬಿಕೆ ದೇವಿಯನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಅರಸರ ಕಾಲದ ರಥದಂತೆ ಹೊಸ ರಥ ಹೊಸ ರೂಪದಲ್ಲಿ ಕಂಗೊಳಿಸಲಿದೆ. ಈ ರಥ ನೋಡಲು ಇನ್ನು ಮುಂದೆ ಸಾಲು ಸಾಲು ಭಕ್ತರ ದಂಡೇ ಹರಿದುಬರಲಿದೆ.